ಸಿಎಂ ಎಚ್’ಡಿಕೆ ಸರ್ಕಾರ 3 ತಿಂಗಳಿನಲ್ಲಿ ಎದುರಿಸಿದ ಸವಾಲುಗಳೇನು..!?
ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಈಗಾಗಲೇ 3 ತಿಂಗಳು ಆಯಿತು.. ಮೇ 23ರಂದು ಎಚ್.ಡಿ.ಕೆ ಅವರು ವಿಧಾನಸೌಧದ ಮುಂದೆ ಸಿಎಂ ಆಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು.
ಈ ಮೈತ್ರಿ ಸರ್ಕಾರವನ್ನು ಪತನ ಮಾಡಲೆಂದು ವಿರೋಧ ಪಕ್ಷ ಸಾಕಷ್ಟು ತಂತ್ರಗಳನ್ನು ರೂಪಿಸುತ್ತಿದ್ದರೂ ಕೂಡ ಯಾವುದು ವರ್ಕೌಟ್ ಆಗುತ್ತಿಲ್ಲ. ಬಿಜೆಪಿ ಪಕ್ಷದ ಮಾತಿಗೆ ಸೆಡ್ಡು ಹೊಡೆಯುವಂತೆ ಜೆಡಿಎಸ್-ಕಾಂಗ್ರೆಸ್ ಒಂದಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿವೆ. ಸಿಎಂ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ 3 ತಿಂಗಳಿನಲ್ಲಿ ಎದುರಿಸಿದ ಸವಾಲುಗಳು ಇಲ್ಲಿವೆ.ಮೊದಲಿಗೆ ಸಂಪುಟ ರಚನೆ, ಸಾಲಮನ್ನಾ,ಬಜೆಟ್ ಮಂಡನೆ, ಮಹದಾಯಿ ವಿವಾದ, ಕೊಡಗು ಪ್ರವಾಹ ಹೀಗೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರೂ ಸೂಪರ್ ಸಿಎಂ ಆಗಿ ಎಲ್ಲರ ಜನ ಮನ ಗೆದ್ದಿದ್ದಾರೆ.
Comments