ರೈತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಸಾಲ ಮನ್ನಾ ಎನ್ನುವುದು ಹಲವು ಗೊಂದಲಗಳಿಗೆ ಸಾಕ್ಷಿ ಆಗುವ ರೀತಿ ಇತ್ತು.ಇದೀಗ ಎಲ್ಲದಕ್ಕೂ ತೆರೆ ಬೀಳುತ್ತಿದೆ. ಒಂದು ರೈತ ಕುಟುಂಬದ ಒಬ್ಬ ಸದಸ್ಯರ ಸಾಲವನ್ನು ಮಾತ್ರ ಮನ್ನಾ ಮಾಡಲಾಗುವುದು ಎಂಬ ಷರತ್ತು ಕೈಬಿಟ್ಟು ಸದ್ಯದಲ್ಲೇ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವರಾದ ಬಂಡೆಪ್ಪ ಕಾಶಂಪುರ ತಿಳಿಸಿದ್ದಾರೆ.
ಸಹಕಾರ ಸಂಸ್ಥೆಗಳ ಸಾಲ ಮನ್ನಾ ಸಂಬಂಧ ಕಳೆದ ವಾರ ಹೊರಡಿಸಿದ್ದ ಆದೇಶದಲ್ಲಿ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ ಎಂಬ ಷರತ್ತು ತಪ್ಪಾಗಿ ಸೇರಿಕೊಂಡಿತ್ತು. ಈ ಷರತ್ತು ಕೈಬಿಟ್ಟು ಕುಟುಂಬದ ಸದಸ್ಯರು ಬೆಳೆ ಸಾಲ ಪಡೆದಿದ್ದರೂ ಈ ಸೌಲಭ್ಯಕ್ಕೆ ಅರ್ಹರು ಎಂಬ ತಿದ್ದುಪಡಿಯೊಂದಿಗೆ ಹೊಸ ಆದೇಶ ಹೊರಡಿಸಲಾಗುವುದು ಎಂದು ಸಹಕಾರ ಸಚಿವರಾದ ಬಂಡೆಪ್ಪ ಕಾಶಂಪುರ ತಿಳಿಸಿದ್ದಾರೆ.
Comments