ಕೊಡಗು ಪ್ರವಾಹ ಕುರಿತು ಸಿಎಂ ಹೆಚ್ಡಿಕೆ ತೆಗೆದುಕೊಂಡ ಮಹತ್ವದ ನಿರ್ಧಾರ..! ಏನ್ ಗೊತ್ತಾ..?
ಕೊಡಗು ಮತ್ತು ಮತ್ತಿತ್ತರ ಕೆಲವು ಜಿಲ್ಲೆಗಳಲ್ಲಿ ಅತೀವೃಷ್ಟಿಯಿಂದಾಗಿ ಸಾಕಷ್ಟು ಜನ ನಿರಾಶ್ರಿತರಾಗಿದ್ದಾರೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಸರ್ಕಾರದ ಭೂಮಿಗಳನ್ನು ಗುರುತು ಮಾಡಿ ಅಲ್ಲಿಯೇ ನಿರಾಶ್ರಿತರಿಗೆ ಜಾಗ ನೀಡಬೇಕು, ಅಲ್ಲಿ ತನಕ ಸರ್ಕಾರದ ಆದೇಶಗಳಿಗೆ ಕಾಯದೇ ತಾತ್ಕಾಲಿಕ ಶೆಡ್ ಗಳನ್ನ ಅಳವಡಿಸಿ ಜನರಿಗೆ ಅಗತ್ಯ ನೆರವು ನೀಡುವಂತೆ, ಮಡಿಕೇರಿಗೆ ಜಿಲ್ಲಾದಿಕಾರಿಗೆ ಆದೇಶ ನೀಡಲಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದ ಭೂಮಿ ಗುರುತಿಸಿ ತಾತ್ಕಾಲಿಕ ವಾಸದ ಶೆಡ್ ನಿರ್ಮಿಸಬೇಕು. ಮನೆಗಳನ್ನು ನಿರ್ಮಿಸುವವರೆಗೂ ಕೂಡ ಅವರನ್ನು ಗಂಜಿ ಕೇಂದ್ರದಲ್ಲೇ ಇರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ವಿದ್ಯಾಶ್ರೀ ಅವರಿಗೆ ಸೂಚನೆಯನ್ನು ನೀಡಿದ್ದಾರೆ.
Comments