ಮಾನವೀಯತೆ ಮರೆತ ಸಚಿವ ಎಚ್.ಡಿ ರೇವಣ್ಣ..! ವಿಡಿಯೋ ವೈರಲ್

ನೆರೆ ಸಂತ್ರಸ್ತರಿಗೆ ಎಲ್ಲರೂ ಕೂಡ ಸಹಾಯ ಮಾಡುತ್ತಿದ್ದಾರೆ. ಆದರೆ ಸಹಾಯ ಮಾಡಿದ ಬೆನ್ನಲೆ ಟೀಕೆಗೂ ಕೂಡ ಗುರಿಯಾಗಿದ್ದಾರೆ.
ಲೋಕೋಪಯೋಗಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿಯ ಸಚಿವರಾದ ಎಚ್.ಡಿ. ರೇವಣ್ಣ ಹಾಸನದಲ್ಲಿರುವ ರಾಮನಾಥಪುರದ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ, ಬಿಸ್ಕೆಟ್ ಪ್ಯಾಕೆಟ್ ಗಳನ್ನು ಜನರತ್ತ ಎಸೆಯುತ್ತಿರುವ ವೀಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಭಾನುವಾರದಂದು ನಿರಾಶ್ರಿತ ಸಮಸ್ಯೆ ಆಲಿಸಲು ರಾಮನಾಥಪುರಕ್ಕೆ ಹೋಗಿದ್ದಂತಹ ಸಚಿವ ರೇವಣ್ಣ ನಿರಾಶ್ರಿತರೊಂದಿಗೆ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಇದೀಗ ಗುರಿಯಾಗಿದೆ. ಪ್ರವಾಹ ನಿರಾಶ್ರಿತರಿಗೆ ಬಿಸ್ಕೆಟ್ ಎಸೆಯುವ ಮೂಲಕ ಅಮಾನವೀಯತೆಯನ್ನು ಮೆರೆದಿದ್ದಾರೆ ಎಂಬ ಟೀಕೆಗೆ ಹೆಚ್ ಡಿ ರೇವಣ್ಣ ಗುರಿಯಾಗಿದ್ದಾರೆ.
Comments