ಹೆಚ್.ಡಿ. ರೇವಣ್ಣ ಪರ ನಿಂತ ಡಿಸಿಎಂ ಜಿ.ಪರಮೇಶ್ವರ್..!
ಇತ್ತಿಚಿಗೆ ಉಂಟಾದ ಪ್ರವಾಹದಿಂದಾಗಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಎಲ್ಲರೂ ಬಂದಿದ್ದಾರೆ.ಪ್ರವಾಹ ಬಂದಾಗ ಹೆಚ್ ಡಿ ರೇವಣ್ಣ ಅವರು ಕೂಡ ಖುದ್ದಾಗಿ ಸ್ಥಳಕ್ಕೆ ತೆರಳಿದ್ದು, ಸಂತ್ರಸ್ತರನ್ನು ನಿರ್ಲಕ್ಷ್ಯ ಮಾಡಲು ಹೇಗೆ ಸಾಧ್ಯ ಎಂದು ಡಿಸಿಎಂ ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಮನೆ ಕಳೆದುಕೊಂಡು ನೆರೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವಂತಹ ಸಂತ್ರಸ್ತರಿಗೆ ನೆರವು ನೀಡಲು ತೆರಳಿದಾಗ ಮಾನವೀಯತೆ ಮರೆತಿದ್ದಾರೆ ಎಂಬ ಆರೋಪಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ, ರೇವಣ್ಣ ವಿರುದ್ಧದ ಆರೋಪವನ್ನು ಪರಮೇಶ್ವರ್ ಅವರು ಅಲ್ಲಗೆಳೆದಿದ್ದಾರೆ. ಹೆಲಿಕಾಪ್ಟರ್ ನಲ್ಲಿ ನಾವು ಕೂಡ ಆಹಾರ ಪದಾರ್ಥಗಳನ್ನು ಥ್ರೋ ಮಾಡುವುದಿಲ್ಲವೇ? ಕೆಟ್ಟ ದೃಷ್ಟಿಯಿಂದ ಆ ರೀತಿ ಮಾಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್ ಹೇಳಿದ್ದಾರೆ.
Comments