ಈ ಕೆಳಕಂಡ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ..!
ಹಿಂಬಡ್ತಿ ಭೀತಿಯಲ್ಲಿರುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನೌಕರರ ರಕ್ಷಣೆಗೆ ರಾಜ್ಯ ಸರ್ಕಾರವು ಕಾಯ್ದೆಯನ್ನು ಜಾರಿಗೊಳಿಸಿದ್ದರೂ ಕೂಡ ಆತಂಕ ಇನ್ನೂ ನಿವಾರಣೆಯಾಗಿಲ್ಲ.
ಇದರ ನಡುವೆಯೇ ಕೆಲವು ದಿನಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮುಂಬಡ್ತಿ ಪಡೆದವರಿಗೆ ಅಥವ ಹಿಂಬಡ್ತಿ ಪಡೆದವರಿಗೆ ಅವರು ಹಾಲಿ ಕೆಲಸ ಮಾಡುತ್ತಿರುವ ಹುದ್ದೆಗಳಿಗೆ ಅನುಸಾರವಾಗಿಯೇ ವೇತನ ನೀಡುವಂತೆ ಆದೇಶವನ್ನು ನೀಡಿದ್ದರು. ಆದರೆ ಇದೀಗ ಹಿಂಬಡ್ತಿ ಪಡೆದಂತಹ ಎಸ್ಸಿ/ಎಸ್ಟಿ ನೌಕರರ ಮನವಿಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರವು ಹಿಂಬಡ್ತಿ ಪಡೆದಿರುವ ನೌಕರರಿಗೆ ಅವರ ಹಿಂದಿನ ಹುದ್ದೆಯ ವೇತನವನ್ನು ನೀಡುವಂತೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.
Comments