ಅಟಲ್ ಸಾರಿಗೆ ಪುನಶ್ಚೇತನಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯವಿಟ್ಟ ಈ ಬಿಜೆಪಿ ನಾಯಕ

ಹಿಂದೆ ಇದ್ದಂತಹ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದಂತಹ ಅಟಲ್ ಸಾರಿಗೆಯನ್ನು ಪುನಶ್ಚೇತನಗೊಳಿಸುವ ಮೂಲಕ ಅಜಾತಶತ್ರು ವಾಜಪೇಯಿಯವರಿಗೆ ರಾಜ್ಯ ಸರ್ಕಾರವು ನಮನ ಸಲ್ಲಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿಯಾದ ಆರ್ ಅಶೋಕ್ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಆರ್ ಅಶೋಕ್ ಬಡವರ, ಕೂಲಿ ಕಾರ್ಮಿಕರ ಅನುಕೂಲಕ್ಕಾಗಿಯೇ ಜಾರಿಗೆ ತಂದಂತಹ ಅಟಲ್ ಸಾರಿಗೆ ಯೋಜನೆ ಬಡವರ ಪಾಲಿಗೆ ಆಶಾಕಿರಣವಾಗುತ್ತದೆ. ಸರ್ಕಾರಕ್ಕೆ ಇದು ದೊಡ್ಡ ಹೊರೆ ಕೂಡ ಅಲ್ಲ. 1 ಕೋಟಿ ರೂಗಳ ಹೆಚ್ಚುವರಿ ಖರ್ಚು ಬರಬಹುದು ಅಷ್ಟೆ, ಇಂತಹ ಯೋಜನೆ ಮೂಲಕ ಅಜಾತಶತ್ರುವಾದ ವಾಜಪೇಯಿ ಅವರಿಗೆ ರಾಜ್ಯ ಸರ್ಕಾರ ನಮನ ಸಲ್ಲಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ತಿಳಿಸಿದ್ದಾರೆ.
Comments