ಸಿಎಂ ಹೆಚ್’ಡಿಕೆ ಅವರಿಂದ ನೆರೆ ಪೀಡಿತ ಕೊಡಗು ಜಿಲ್ಲೆಯ ಅತೀವೃಷ್ಟಿಗೆ ಬಲಿಯಾದವರಿಗೆ 5 ಲಕ್ಷ ರೂ ಪರಿಹಾರ ಘೋಷಣೆ ಜೊತೆಗೆ ಮತ್ತಷ್ಟು ಪರಿಹಾರಗಳ ಡಿಟೇಲ್ಸ್ ಇಲ್ಲಿದೆ.

ಅತೀವೃಷ್ಟಿಯಿಂದಾಗಿ ಕೊಡಗು, ಕರಾವಳಿ ಭಾಗದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಮಳೆಯಿಂದಾಗಿ ಕೊಡಗಿನಲ್ಲಿ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಾಗಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ, ಪರಿಹಾರದ ಕುರಿತು ಪರಿಶೀಲನೆ ನಡೆಸಲು ನಿರ್ಧಾರ ಮಾಡಿದ್ದಾರೆ.
ಪರಿಹಾರಗಳ ಬಗ್ಗೆ ಸಧ್ಯ ಒಂದಿಷ್ಟು ಮಾಹಿತಿ ಈ ಕೆಳಕಂಡಂತಿದೆ
ಗಂಟೆಗೆ ಒಂದು ಬಾರಿ ಮಾಹಿತಿ ಪಡೆಯುತ್ತಿರುವ ಮುಖ್ಯಮಂತ್ರಿ
ಮೃತರ ಕುಟುಂಬಕ್ಕೆ 5 ಲಕ್ಷ ರೂ ಘೋಷಣೆ
ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸಲಿರುವ ರಾಜ್ಯ ಸರ್ಕಾರ
ರಕ್ಷಣಾ ತಂಡದಲ್ಲಿ ಇಂಡಿಯನ್ ಆರ್ಮಿಯಿಂದ ಒಟ್ಟು 75 ತಂಡ ಆರ್ಮಿ ಇಂಜಿನಿಯರ್ಸ್ ಮತ್ತು ದೋಘಾ ರೆಜಿಮೆಂಟ್ಸ್ ನಿಂದ ಕೆಲಸಗಳು ನಡೆಯುತ್ತಿವೆ.
ಇಂಡಿಯನ್ ನೇವಿಯಿಂದ ಪೈಯರ್ ಪೋರ್ಸ್ ರಕ್ಷಣಾ ತಂಡಗಳು ಕೊಡಗಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
Comments