ಮಾನವೀಯತೆ ಮೆರೆದ ಕುಮಾರಣ್ಣ.. ಕೇಂದ್ರ ರಕ್ಷಣಾ ಸಚಿವೆಗೆ ಪತ್ರ ಬರೆದ ಸಿಎಂ..ಅಷ್ಟಕ್ಕೂ ಪತ್ರದಲ್ಲೇನಿತ್ತು..!?

ಕೊಡಗು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಅತೀವೃಷ್ಟಿ ಉಂಟಾಗಿರುವುದು ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಅವರಿಗೆ ಸಹಾಯ ಮಾಡಲು ಬಯಸುವವರಿಗೆ ಹಲವು ದೂರವಾಣಿ ನಂಬರ್ ಗಳನ್ನು ಕೂಡ ನೀಡಿದ್ದಾರೆ.
ಇದೀಗ ಕೇಂದ್ರ ರಕ್ಷಣಾ ಸಚಿವೆಯಾದಂತಹ ನಿರ್ಮಲಾ ಸೀತಾರಾಮನ್ ಅವರ ಜೊತೆ ಸಿಎಂ ಕುಮಾರಸ್ವಾಮಿಯವರು ಮಾತನಾಡಿದ್ದು ರಾಜ್ಯದ ಮನವಿಗೆ ಸ್ಪಂದಿಸಿದ್ದಾರೆ. ರಕ್ಷಣಾ ಇಲಾಖೆಯಿಂದ ಮತ್ತಷ್ಟು ಅಧಿಕಾರಿಗಳ ನಿಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನವಿಯನ್ನು ಮಾಡಿಕೊಂಡಿದ್ದಾರೆ. ಕೇಂದ್ರ ರಕ್ಷಣಾ ಸಚಿವರ ಜತೆ ದೂರವಾಣೆಯಲ್ಲಿ ಚರ್ಚೆ ನಡೆಸಿರುವ ಸಿಎಂ ಕುಮಾರಸ್ವಾಮಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಮನವರಿಕೆಯನ್ನು ಮಾಡಿಕೊಟ್ಟಿದ್ದಾರೆ. ಸಮಸ್ಯೆಗಳನ್ನು ವಿವರಿಸಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಿಎಂ ಪತ್ರವನ್ನು ಕೂಡ ಬರೆದಿದ್ದಾರೆ. ಕೊಡಗಿನಲ್ಲಿ ವಾಯು ಸೇನಾ ಅಧಿಕಾರಿಗಳಿಂದ ಸಾವಿರಕ್ಕೂ ಹೆಚ್ಚು ಸಂತ್ರಸ್ತರ ರಕ್ಷಣೆಯನ್ನು ಮಾಡಲಾಗಿದೆ. ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಲು ಸಿಎಂ ಮನವಿಯನ್ನು ಮಾಡಿಕೊಂಡಿದ್ದಾರೆ..
Comments