ಮೈತ್ರಿ ಸರ್ಕಾರಕ್ಕೆ ಶುರುವಾಯ್ತು ಹೊಸ ಕಂಟಕ..! 17 ಶಾಸಕರ ರಾಜೀನಾಮೆ..!?

ಈಗಾಗಲೇ ಮೈತ್ರಿ ಸರ್ಕಾರದಿಂದ ಸಾಕಷ್ಟು ತೊಂದರೆಗಳು ಆಗಿವೆ.. ಆದರೂ ಕೂಡ ಮೈತ್ರಿ ಸರ್ಕಾರವು ಕೊಟ್ಟ ಮಾತಿನಂತೆ ಯಾವ ಕೆಲಸಗಳನ್ನು ಮಾಡುತ್ತಿಲ್ಲ ಎಂದು ವಿಪಕ್ಷಗಳು ಹೇಳುತ್ತಿರುವುದು ಎಲ್ಲರಿಗೂ ಕೂಡ ತಿಳಿದೆ ಇದೆ. ಇದೀಗ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಬಿಗ್ ಶಾಕ್ ಉಂಟಾಗಿದೆ.
ರಾಜ್ಯ ಮೈತ್ರಿ ಸರ್ಕಾರದ ಮೇಲೆ ಗರಂ ಆಗಿರುವ 17 ಶಾಸಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ ಹಾಗೂ ಮೈತ್ರಿ ಸರ್ಕಾರ ಪತನಗೊಳಿಸುವ ಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಈಗಾಗಲೆ ಕೇಳಿಬರುತ್ತಿವೆ. ಸಚಿವ ಸ್ಥಾನ ಬೇಡಿಕೆ, ನಿಗಮ ಮಂಡಳಿಗೆ ತಮ್ಮವರ ನೇಮಕ, ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಾಗುತ್ತಿರುವ ವಿಳಂಬ, ಸಮಗ್ರ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿಲ್ಲ ಎಂಬ ಕಾರಣಗಳನ್ನೊಡ್ಡಿ ಸರ್ಕಾರದಿಂದ ಹೊರಬರಲು 17 ಶಾಸಕರು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
Comments