ಸಚಿವ ಡಿ.ಕೆ ಶಿವಕುಮಾರ್’ಗೆ ಶುರುವಾಯ್ತು ಹೊಸ ಕಂಟಕ..!?

ಮೈತ್ರಿ ಸರ್ಕಾರದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಂತಹ ಸಚಿವ ಡಿಕೆ ಶಿವಕುಮಾರ್ ಗೆ ಮತ್ತೊಂದು ಹೊಸ ಕಂಟಕ ಎದುರಾಗಿದೆ. ಆದಾಯ ತೆರಿಗೆ ಇಲಾಖೆ ಹೊಸದಿಲ್ಲಿಯಲ್ಲಿ ನಡೆಸಿದ ದಾಳಿ ವೇಳೆ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಡಿಕೆ ಶಿವಕುಮಾರ್ ಗೆ ಹೊಸ ಸಂಕಟ ಶುರುವಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 2017ರ ಆ.2ರಂದು ದಿಲ್ಲಿಯ 4 ಫ್ಲಾಟ್‌ಗಳ ಮೇಲೆ ದಾಳಿಯನ್ನು ನಡೆಸಿದ್ದರು. ಆ ಸಂದರ್ಭದಲ್ಲಿ 8.59 ಕೋಟಿ ರೂ. ಅಕ್ರಮ ಹಣವು ಪತ್ತೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಐವರ ವಿರುದ್ಧ ಪ್ರಕರಣವು ದಾಖಲಾಗಿತ್ತು. ಇದೇ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯು ಹೊಸದಿಲ್ಲಿಯಲ್ಲಿ ನಡೆಸಿದಂತಹ ದಾಳಿಯ ವೇಳೆ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ತಡೆ ಆದೇಶ ಸಚಿವ ಡಿ.ಕೆ.ಶಿವಕುಮಾರ್ ಆಪ್ತನಾದ ಸಚಿನ್ ನಾರಾಯಣನ್ ಅವರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ನ್ಯಾ.ಬಿ.ವೀರಪ್ಪ ಅವರಿದ್ದ ಹೈಕೋರ್ಟ್ ನ ಏಕಸದಸ್ಯಪೀಠ ಸ್ಪಷ್ಟತೆ ಪಡಿಸಿದೆ. ಹೀಗಾಗಿ ಸಚಿವ ಡಿಕೆ ಶಿವಕುಮಾರ್ ಗೆ ಹೊಸ ಸಂಕಟ ಶುರುವಾಗಿದೆ.
Comments