ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಎಚ್ಚರಿಕೆ ಕೊಟ್ಟಿದು ಯಾರಿಗೆ..!?

ದೇಶದಲ್ಲಿ ಒಂದು ರಾಷ್ಟ್ರೀಯ ಪಕ್ಷ ಮಾತ್ರ ತನ್ನ ಶಕ್ತಿಯನ್ನು ಬೆಳೆಸಿಕೊಂಡಿದೆ, ಇದು ಮುಂದಿನ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಮಾಜಿ ಪ್ರಧಾನಿಯಾದ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ವಿಧಾನಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹಾಗೂ ಪ್ರೊ.ವಲೇರಿಯನ್ ರೊಡ್ರಿಗನ್ ಅವರು ಇಂಗ್ಲಿಷ್‌ನಲ್ಲಿ ಹೊರತಂದಿದ್ದಂತಹ 'ಇಂಡಿಯನ್ ಪಾರ್ಲಿಮೆಂಟ್' ಪುಸ್ತಕವನ್ನು ಪ್ರೊ.ಜೆ.ಎಸ್.ಸದಾನಂದ ಅವರು ಕನ್ನಡಕ್ಕೆ ಅನುವಾದಿಸಿ ಅಂಕಿತ ಪ್ರಕಾಶನ ಮುದ್ರಿಸಿರುವ 'ಭಾರತದ ಸಂಸತ್ತು- ಒಂದು ಕಾರ್ಯನಿರತ ಪ್ರಜಾಪ್ರಭುತ್ವ' ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಅವರು ಮಾತನಾಡಿದರು. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರವಾಗಿ ನಿಲ್ಲವ ಭದ್ರ ಬುನಾದಿಯನ್ನು ಹಾಕಿದ್ದು ಮಾಜಿ ಪ್ರಧಾನಿಯಾದಂತಹ ಜವಾಹರ್‌ಲಾಲ್ ನೆಹರು. ಗಾಂಧೀಜಿ ಅವರನ್ನು ರಾಷ್ಟ್ರಪಿತ ಎಂದು ಕರೆಯುವಂತೆ ನೆಹರೂ ಅವರನ್ನು ದೇಶದ ಪ್ರಜಾಪ್ರಭುತ್ವದ ಬುನಾದಿದಾರ ಎಂದು ಕರೆಯಬೇಕು. ಆದರೆ, ಇತ್ತೀಚೆಗೆ ಅವರ ಕೊಡುಗೆ ಬಗ್ಗೆಯೇ ಕೆಲವರು ಲಘುವಾಗಿ ಮಾತನಾಡುತ್ತಿರುವುದು ಸರಿಯಿಲ್ಲ ಎಂದು ಹೇಳಿದ್ದಾರೆ.
Comments