ರೈತರಿಗೆ ಗುಡ್ ನ್ಯೂಸ್ : ಸಾಲಮನ್ನಾ ಜೊತೆಯಲ್ಲಿಯೇ ಹೊಸ ಸಾಲ..! ರಾಜ್ಯ ಸರ್ಕಾರದಿಂದ 10 ರಿಂದ 15 ಲಕ್ಷ ಹೊಸ ರೈತರಿಗೆ ಸಾಲ

ನೆನ್ನೆ ತಾನೇ ಸಾಲ ಮನ್ನಾಗೆ ಮೂಹೂರ್ತ ಫಿಕ್ಸ್ ಮಾಡಿರುವ ರಾಜ್ಯ ಸರ್ಕಾರವು ಅದರ ಬೆನ್ನಲೆ ರೈತರಿಗೆ ಹೊಸ ಸಾಲ ನೀಡಲು ಸಜ್ಜಾಗುತ್ತಿದೆ. ಇದೀಗ ರಾಜ್ಯ ಸರ್ಕಾರವು ಸಾಂಸ್ಥಿಕ ಸಾಲ ಸೌಲಭ್ಯದಿಂದ ಹೊರಗುಳಿದಿರುವಂತಹ ಸರಿ ಸುಮಾರು 30 ಲಕ್ಷ ರೈತ ಕುಟುಂಬಗಳನ್ನು ಸಹಕಾರಿ ಸಂಘಗಳ ಸದಸ್ಯರಾಗಿಸಿ ನಂತರ ಸಾಲವನ್ನು ಕೊಡಲು ತಿರ್ಮಾನಿಸಿದೆ.
ರಾಜ್ಯ ಸರ್ಕಾರವು ಮುಂಬರುವ ಒಂದು ವರ್ಷದ ಅವಧಿಯಲ್ಲಿ 10 ರಿಂದ 15 ಲಕ್ಷ ಹೊಸ ರೈತರಿಗೆ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ವಿತರಣೆಗೆ ಚಿಂತನೆಯನ್ನು ನಡೆಸಲಾಗಿದ್ದು, ಈ ತೀರ್ಮಾನಕ್ಕೆ ನಬಾರ್ಡ್ ನಿಂದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರವು ನಿರೀಕ್ಷಿಸಿದೆ. ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪುರ್ ಮಾಧ್ಯಮದವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ 78 ಲಕ್ಷ ರೈತ ಕುಟುಂಬಗಳನ್ನು ಅಂದಾಜು ಮಾಡಲಾಗಿದೆ. ಈ ಪೈಕಿ 22 ಲಕ್ಷ ರೈತರು ಮಾತ್ರವೇ ಸಹಕಾರ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಸುಮಾರು 28 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಗಳನ್ನು ಪಡೆದಿದ್ದಾರೆ. ರೈತರು ಸಹಕಾರಿ ಸಂಘಗಳ ಸದಸ್ಯರಾದವರು ಈ ಸೌಲಭ್ಯವನ್ನು ಪಡೆಯಬಹುದು.
Comments