ರೈತರಿಗೆ ಗುಡ್ ನ್ಯೂಸ್ : ನಿಮ್ಮ ಕೈ ಸೇರಲಿದೆ ಸಾಲ ಋಣ ಮುಕ್ತ ಪತ್ರ..!

ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ರೈತರ ಸಾಲ ಮನ್ನಾದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇವೆ.ಆದರೆ ಇದರ ಬೆನ್ನಲೆ ರೈತರಿಗೆ ಮತ್ತೊಂದು ಸಂತಸದ ಸುದ್ದಿಯೊಂದನ್ನು ಸರ್ಕಾರ ನೀಡಿದೆ.
ರೈತರಿಗೆ ಶೀಘ್ರದಲ್ಲಿ ಸಾಲ ಋಣ ಮುಕ್ತ ಪತ್ರವನ್ನು ವಿತರಿಸುತ್ತೇವೆ ಎಂದು ಸಹಕಾರಿ ಸಚಿವರಾದ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ 9 ನೇ ತಾರೀಖು ನಡೆದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹಲವು ರೀತಿಯ ನಿರ್ಣಯಗಳನ್ನು ಕೈಗೊಳ್ಳಾಗಿತ್ತು, ಸಾಲ ಮನ್ನಾಗೆ ಈಗ ಚಾಲನೆ ದೊರೆತಿದ್ದು, 9448 ಕೋಟಿ ರೂ ಸಾಲ ಮನ್ನಾ ಆಗಲಿದೆ ಎಂದು ತಿಳಿಸಿದರು.
Comments