ಬಿ.ಎಸ್.ವೈ ರನ್ನು ಬೆಚ್ಚಿಬೀಳಿಸಿದ ಸಚಿವ ಎಚ್.ಡಿ. ರೇವಣ್ಣ ನವರ ಈ ಅಸ್ತ್ರ..!!

ರಾಜಕೀಯ ಎನ್ನುವುದು ಒಂದು ರೀತಿಯ ಚದುರಂಗದಾಟ ಎನ್ನಬಹುದು. ಯಾವ ಸಮಯದಲ್ಲಿ ಏನು ಬೇಕಾದರೂ ಕೂಡ ಆಗಬಹುದು.. ಬಿಜೆಪಿಯ 30 ಶಾಸಕರು ಜೆಡಿಎಸ್'ಗೆ ಬರಲು ಸಿದ್ದರಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪ ಅವರಿಗೆ ನೋವಾಗುವ ಕೆಲಸ ಮಾಡಬಾರದು ಯಾರು ಜೆಡಿಎಸ್'ಗೆ ಪಕ್ಷಕ್ಕು ಬರೋದು ಬೇಡ ಅಂತ ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರಿಗೆ ಒಳ್ಳೆಯ ಗಿಫ್ಟ್ ಕೊಡುತ್ತೇವೆ ಕಾಯಿರಿ ಎಂದು ಕೂಡ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದ್ದಾರೆ. ಬಿಜೆಪಿಯವರಿಗೆ ಯಾವ ಕೆಲಸವು ಇಲ್ಲದಿದ್ದಾಗ ಟ್ವೀಟ್ ಮಾಡುತ್ತಾರೆ. ಬಿಜೆಪಿ ಮತ್ತು ಯಡಿಯೂರಪ್ಪ ಅವರ ಟ್ವೀಟ್'ಗಳಿಗೆ ಉತ್ತರ ನೀಡುತ್ತಾ ಹೋದರೆ ನಾವೂ ಪೊಳ್ಳಾಗುತ್ತೇವೆ. ಟ್ವೀಟ್ ಮಾಡುತ್ತಿರುವ ಬಿಜೆಪಿ ಅವರಿಗೆ ನಾಚಿಕೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ರೇವಣ್ಣ ಈ ಸಂದರ್ಭದಲ್ಲಿ ಕಿಡಿಕಾರಿದ್ದಾರೆ.
Comments