ರಾಜ್ಯ ಸರ್ಕಾರದಿಂದ ಸಾಲ ಮನ್ನಾದ ಜೊತೆಗೆ ರೈತರಿಗೆ ಸಿಕ್ತಿದೆ ಮತ್ತೊಂದು ಭರ್ಜರಿ ಕೊಡುಗೆ..!

ಶ್ರೀಗಂಧ ಎಂದರೆ ನಮಗೆ ನೆನಪಾಗೋದೆ ಕರ್ನಾಟಕ.. ಶ್ರೀಗಂಧದ ತವರು ಎಂದೆ ಹೆಸರಾಗಿರುವ ಕರ್ನಾಟಕದಲ್ಲಿ ಶ್ರೀಗಂಧದ ಮರಗಳನ್ನು ಉಳಿಸಲು ಸರ್ಕಾರ ಇದೀಗ ತಂತ್ರಜ್ಞಾನದ ಮೊರೆಹೋಗಿದೆ.
ಅಷ್ಟೆ ಅಲ್ಲದೆ ಶ್ರೀಗಂಧದ ಉತ್ಪಾದನೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಸಿದ್ದವಾಗಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ರೈತರು ಗಂಧ ಬೆಳೆಯುವಂತೆ ಮಾಡಲು ಹೊಸ ಯೋಜನೆ ರೂಪಿಸುತ್ತಿರುವುದು ಇದೀಗ ಬಾರಿ ಸುದ್ದಿಯಲ್ಲಿದೆ. ಪ್ರತಿ ಗಂಧದ ಗಿಡಗಳಲ್ಲಿಯೂ ಮೈಕ್ರೋಚಿಪ್ ಅನ್ನು ಅಳವಡಿಸಲಾಗುತ್ತೆ ಹಾಗೆಯೇ ಹಾಡಹಗಲೇ ಗಂಧದ ಮರವನ್ನೇ ಕದ್ದೊಯ್ಯುವವರನ್ನು ಮಟ್ಟ ಹಾಕುವಂತಹ ಯೋಜನೆಗೆ ಇದೀಗ ರಾಜ್ಯ ಸರ್ಕಾರ ಕೈ ಹಾಕಿದೆ. ಇದಕ್ಕಾಗಿ, ರೈತರಿಗೆ ಮೈಕ್ರೋಚಿಪ್, ಸಿಗ್ನಲ್ ಚಿಪ್ ಮತ್ತು ಗಂಧದ ಮರಗಳನ್ನು ಕಾಯಲು ಸಿ.ಸಿ. ಕ್ಯಾಮರಾಗಳನ್ನು ಪೂರೈಸುವ ಚಿಂತನೆಯನ್ನು ನಡೆಸಿದೆ.
Comments