ಕಾಂಗ್ರೆಸ್’ಗೆ ಮೂರು ಷರತ್ತುಗಳನ್ನು ವಿಧಿಸಿದ ದೇವೇಗೌಡರು..! ಆ ಷರತ್ತುಗಳು ಏನ್ ಗೊತ್ತಾ..?

ರಾಜಕೀಯ ವಲಯದಲ್ಲಿ ಸಾಕಷ್ಟು ಒಳ ಜಗಳಗಳು ನಡೆಯುತ್ತಲೇ ಇರುತ್ತವೆ.ರಾಜಕೀಯದಲ್ಲಿ ದೇವೆಗೌಡರು ಉರುಳಿಸುವ ದಾಳಗಳ ರಣತಂತ್ರಗಳನ್ನು ಅರಿಯೋದು ಎಲ್ಲರಿಗೂ ಕೂಡ ತುಂಬಾ ಕಷ್ಟ. ಕೂತಲ್ಲೆ ರಾಜಕೀಯ ಎಂಬ ಚದುರಂಗದ ಆಟ ಆಡೋ ಈ ನಾಯಕನ ಮಾಸ್ಟರ್ ಪ್ಲ್ಯಾನ್ ಯಾರಿಗೂ ಕೂಡ ಅಷ್ಟು ಸುಲಭವಾಗಿ ಅರ್ಥ ಆಗಲ್ಲ.
ಇದೀಗ ಕಾಂಗ್ರೆಸ್ಗೆ ದೇವೇಗೌಡರು ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದೇವೇಗೌಡರು ತಾವು ವಿಧಿಸಿರುವಂತಹ ಷರತ್ತುಗಳನ್ನು ಕಾಂಗ್ರೆಸ್ ಒಂದು ವೇಳೆ ಒಪ್ಪಿಕೊಂಡಲ್ಲಿ ಎರಡೂ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ ಎಂದು ಯೋಚನೆ ಮಾಡಿದ್ದಾರೆ. ದೇವೇಗೌಡರು ಕಾಂಗ್ರೆಸ್ ನ ಹೈಕಮಾಂಡ್ ಗೆ ವಿಧಿಸಿರುವ ಮೂರು ಪ್ರಮುಖ ಷರತ್ತುಗಳು ಈಗಿವೆ
- ಕಾಂಗ್ರೆಸ್ ಹೈಕಮಾಂಡಿಗೆ ಸಿದ್ದರಾಮಯ್ಯ ಬೇಕೋ .. ಮುಂದಿನ ವರ್ಷದ ಲೋಕಸಭೆ ಚುನಾವಣೆ ಬೇಕೋ ಅನ್ನೋದನ್ನ ನಿರ್ಧಾರ ಮಾಡಿ,
- ಸಮನ್ವಯ ಸಮಿತಿಯು ಎಲ್ಲದಕ್ಕೂ ಅನ್ವಯವಾಗುವುದಿಲ್ಲ. ಮುಖ್ಯ ವಿಚಾರಗಳು ಇಲ್ಲಿ ಚರ್ಚೆಯಾಗಬೇಕು. ಬೇರೆ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧಾರ ಮಾಡಬೇಕು.
- ನಿಮ್ಮ ನಾಯಕರಿಗೂ ಮತ್ತು ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಿಮ್ಮವರನ್ನ ನೀವೇ ನಿಯಂತ್ರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಮಾತ್ರ ಒಪ್ಪಂದ ಮಾಡಬೇಕು ಎಂದಿದ್ದಾರೆ.
ರಾಜಕೀಯ ವಲಯದ ಮುಂದಿನ ಬೆಳವಣಿಗೆಗಳು ಏನೇನಾಗಬಹುದು ಎಂಬ ಪ್ರಶ್ನೆ ಕುತೂಹಲವನ್ನು ಕೆರಳಿಸಿರುವುದು ಸುಳ್ಳಲ್ಲ..
Comments