ಲೋಕಸಭಾ ಚುನಾವಣೆ: ರಾಜಕೀಯ ವಲಯಗಳನ್ನೆ ಬೆಚ್ಚಿ ಬೀಳಿಸುವಂತಿದೆ ದೇವೆಗೌಡರ ಈ ಮಹತ್ವದ ನಿರ್ಧಾರ..!

08 Aug 2018 4:08 PM | Politics
15548 Report

ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಹುಡುಕುವುದು ಎಷ್ಟು ಕಷ್ಟನೋ ಅದೇ ರೀತಿ ದೇವೆಗೌಡರ ಮಾಸ್ಟರ್ ಪ್ಯ್ಲಾನ್ ಗಳನ್ನು ತಿಳಿದುಕೊಳ್ಳೊದು ಕಷ್ಟ.. ಅದೇ ರೀತಿಯಾಗಿ ರಾಜಕೀಯದಲ್ಲಿ ದೇವೆಗೌಡರು ಉರುಳಿಸುವ ದಾಳಗಳ ರಣತಂತ್ರಗಳನ್ನು ಅರಿಯೋದು ತುಂಬಾ ಕಷ್ಟ. ಕೂತಲ್ಲೆ ರಾಜಕೀಯ ಎಂಬ ಚದುರಂಗದ ಆಟ ಆಡೋ ಈ ನಾಯಕನ ಮಾಸ್ಟರ್  ಪ್ಲ್ಯಾನ್ ಯಾರಿಗೂ ಅರ್ಥ ಆಗಲ್ಲ. ದೊಡ್ಡ ದೊಡ್ಡ ರಾಜಕೀಯ ಮುಖಂಡರೇ ಅವರ ಮನೆ ಬಾಗಿಲಿಗೆ ಬರ್ತಾರೆ..ಈ ನಾಯಕ ರಾಜಕೀಯ ವಲಯದಲ್ಲಿ ಒಂದು ರೀತಿಯ ಸಂಚಲನವನ್ನೆ ಮೂಡಿಸಿರುವಂತಹ ನಾಯಕ.. ಈ ವಯಸ್ಸಿನಲ್ಲಿ ಕೂಡ ಯಾರಿಗೂ ಕಡಿಮೆ ಅನ್ನುವ ರೀತಿ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೇವೆಗೌಡರು  ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು.ಅಷ್ಟೆ ಅಲ್ಲದೆ ಮೊಮ್ಮಗನಿಗೆ ಹಾಸನ ಜಿಲ್ಲೆಯನ್ನು ಬಿಟ್ಟು ಕೊಟ್ಟು ತನ್ನ ಉತ್ತರಾದಿಕಾರಿಯಾಗಿ ಬೆಳೆಸೋ ಮಾತನ್ನಾಡಿದ್ದರು. ಆದರೆ ಆ ಎಲ್ಲ ಮಾತು ಅಂದಿನ ರಾಜಕೀಯ ಕ್ಷಣಗಳಿಗೆ ಮಾತ್ರ ಅನ್ನೋದು ಎಲ್ಲರಿಗೂ ತಿಳಿತಾ ಇದೆ.. ಆದರೆ ಮಕ್ಕಳನ್ನು ರಾಜಕೀಯ ರಂಗದಲ್ಲಿ ಬೆಳೆಸಿದ ಹಾಗೆ ಮೊಮ್ಮಕ್ಕಳನ್ನು ಕೂಡ ಬೆಳೆಸುತ್ತಿದ್ದಾರೆ. ಇದೀಗ ಮೊಮ್ಮಕ್ಕಳಿಗಾಗಿ ಭದ್ರ ಕೋಟೆಯನ್ನು ರೆಡಿಮಾಡಿಕೊಳ್ಳುತ್ತಿದ್ದಾರೆ. ರೇವಣ್ಣ ಅವರ ಮಗ ಪ್ರಜ್ವಲ್ ರಾಜಕೀಯ ಕ್ಷೇತ್ರಕ್ಕೆ ಬರೋದು ಮೊದಲೇ ಖಚಿತವಾಗಿತ್ತು.. ಆದರೆ ಲೋಕಸಭಾ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯವರು ಕೂಡ ಸ್ಪರ್ಧಿಸುತ್ತಾರೆ ಅನ್ನೋದು ಜೆಡಿಎಸ್ ವಲಯದಲ್ಲೆ ಹೆಚ್ಚು ಚರ್ಚೆಗೆ ಒಳಪಟ್ಟಿದೆ..ಇದೀಗ ಹಾಸನದಿಂದ ದೇವೆಗೌಡರು,ಮೈಸೂರಿನಿಂದ ಪ್ರಜ್ವಲ್ ಹಾಗೂ ಚಿಕ್ಕಬಳ್ಳಾಪುರದಿಂದ ನಿಖಿಲ್ ಅಖಾಡಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಯಾರ ಪಾಲಿಗೆ ಒಲಿಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments