ಲೋಕಸಭಾ ಚುನಾವಣೆಯ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ದೇವೆಗೌಡರ ಮೊಮ್ಮಗ ಪ್ರಜ್ವಲ್..!

ಈಗಾಗಲೇ ಲೋಕಸಭೆ ಚುನಾವಣೆಗೆ ಸಕಲ ಸಿದ್ದತೆಗಳು ಕೂಡ ನಡೆಯುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾದ ಪ್ರಶ್ನೆಗಳಿಗೆ ಜೆಡಿಎಸ್ ಯುವ ನಾಯಕ, ಎಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸ್ಪಷ್ಟನೆ ಈಗಾಗಲೇ ನೀಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದಾಗ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸಬಹುದು ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಸುಳಿವನ್ನು ಕೊಟ್ಟಿದ್ದರು.ಈ ಬಗ್ಗೆ ಮಾಧ್ಯಮಗಳು ಪ್ರಜ್ವಲ್ ಅವರನ್ನು ಪ್ರಶ್ನಿಸಿದಾಗ ದೇವೇಗೌಡರ ನಿರ್ಧಾರಕ್ಕೆ ಬದ್ಧ ಎಂದು ಇಳಿಸಿದ್ದರು. ನಾನು ನನ್ನ ತಾತ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಹೇಳಿದ ಹಾಗೆಯೇ ಕೇಳ್ತೀನಿ. ದೇವೇಗೌಡರ ನಿರ್ಧಾರಕ್ಕೆ ನಾನು ಯಾವಾಗಲೂ ಬದ್ಧ ಎಂದಿದ್ದಾರೆ. ಅವರು ಲೋಕ ಸಭೆ ಚುನಾವಣೆಯಲ್ಲಿ ಸ್ಪರ್ಧಿಸು ಎಂದರೆ ಸ್ಪರ್ಧಿಸುತ್ತೇನೆ ಇಲ್ಲ ಎಂದರೆ ಇಲ್ಲ ಎಂದಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದಲೂ ಕೂಡ ಅನಾರೋಗ್ಯದಿಂದಾಗಿ ಮನೆಯಲ್ಲೇ ಇದ್ದೆ. ಸಕ್ರಿಯ ರಾಜಕಾರಣದಿಂದ ದೂರವಿದ್ದೆ' ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
Comments