ಬಿಗ್ ಬ್ರೇಕಿಂಗ್ : ಲೋಕಸಭಾ ಚುನಾವಣೆಗೆ ಈ ಕ್ಷೇತ್ರದಿಂದ ಅಂಬಿ ಸ್ಪರ್ಧೆ..! ಯಾವ ಪಕ್ಷದಿಂದ ಗೊತ್ತಾ..!?

ರಾಜ್ಯ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದ ಮಾಜಿ ಸಚಿವ ಅಂಬರೀಶ್ ಅವರನ್ನು ಲೋಕಸಭೆ ಚುನಾವಣೆ ಉದ್ದೇಶದಿಂದ ಮೈಸೂರು ಕ್ಷೇತ್ರದಿಂದ ಅಖಾಡಕ್ಕಿಳಿಸಲು ಕಾಂಗ್ರೆಸ್ ನ ಕೆಲ ನಾಯಕರು ಲೆಕ್ಕಚಾರ ಹಾಕಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಅಂಬರೀಶ್ ಅವರು ಈ ಕುರಿತು ತಮ್ಮ ಆಪ್ತರ ಬಳಿ ಚರ್ಚೆಸಿದ್ದಾರೆ ಎನ್ನಲಾಗಿದ್ದು, ಅಂದುಕೊಂಡಂತೆ ಆದರೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಅಂಬರೀಶ್ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯೊಂದು ಕೇಳಿ ಬರುತ್ತಿದೆ. ಇನ್ನು ಜೆಡಿಎಸ್ ನಾಯಕರು ಕೂಡ ಅಂಬರೀಶ್ ಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಲೆಕ್ಕಚಾರ ಹಾಕುತ್ತಿದ್ದೆ ಎಂದು ಹೇಳಲಾಗಿದ್ದು, ಒಂದು ವೇಳೆ ಅಂಬರೀಶ್ ಜೆಡಿಎಸ್ ಸೇರ್ಪಡೆಯಾದರೆ ಮಂಡ್ಯ ಕ್ಷೇತ್ರದಿಂದ ಅವರ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ.
Comments