ಬಿಗ್ ಬ್ರೇಕಿಂಗ್ : ‘ಕೈ’ ಹೈಕಮಾಂಡ್ ನಿಂದ ಮಾಜಿ ಸಿಎಂ ಸಿದ್ದುಗೆ ಬಿಗ್ ಶಾಕ್ ..!ಇವರಿಗೆ ಫಿಕ್ಸ್ ಆಯ್ತು ಸಿಎಲ್ ಪಿ ನಾಯಕನ ಪಟ್ಟ..!

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹೊಣೆಗಾರಿಕೆಯಿಂದ ಸಿದ್ದರಾಮಯ್ಯ ಅವರನ್ನು ಮುಕ್ತಗೊಳಿಸಿ ಡಿಸಿಎಂ ಪರಮೇಶ್ವರ್ ಅವರಿಗೆ ಈ ಜವಾಬ್ದಾರಿ ನೀಡಲಾಗುತ್ತದೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದ ಬಳಿಕ ಇಂತಹ ಚರ್ಚೆ ಶುರುವಾಗಿದ್ದು, ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಮಹತ್ವದ ಕಾರ್ಯ ನಿರ್ವಹಿಸಲು ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನ ಮುಂದಾಳತ್ವ ವಹಿಸಿರುವ ಡಿಸಿಎಂ ಪರಮೇಶ್ವರ್ ಅವರಿಗೆ ಸಿಎಲ್ ಪಿ ನಾಯಕನ ಪಟ್ಟವನ್ನೂ ಕಟ್ಟಬಹುದು. ಈ ಸಂಬಂಧ ಪರಮೇಶ್ವರ್ ಬೆಂಬಲಿಗರು ಒತ್ತಡ ತಂದಿದ್ದಾರೆ ಎನ್ನಲಾಗಿದೆ.
Comments