ಕಾಂಗ್ರೆಸ್ ಹೈ ಕಮಾಂಡ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಭರ್ಜರಿ ಗಿಫ್ಟ್..!! ಏನ್ ಗೊತ್ತಾ?

ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಹೊಣೆಯ ಬೆನ್ನಲ್ಲೇ ಈಗ ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈ ಕಮಾಂಡ್ ಸ್ಥಾನವನ್ನು ನೀಡಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ 23 ಜನರ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಇದರಲ್ಲಿ ಕರ್ನಾಟಕದ ಸಿದ್ದರಾಮಯ್ಯ ಹಾಗೂ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದಲ್ಲದೇ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪಗೆ ಸ್ಥಾನ ಸಿಕ್ಕಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮೋತಿಲಾಲ್ ವೋರಾ, ಗುಲಾಬ್ ನಬಿ ಅಜಾದ್, ಎ.ಕೆ.ಆಂಟನಿ, ಅಹಮ್ಮದ್ ಪಟೇಲ್, ಅಂಬಿಕಾ ಸೋನಿ, ಉಮ್ಮನ್ ಚಾಂಡಿ, ತರುಣ್ ಗೋಗಾಯ್, ಆನಂದ್ ಶರ್ಮಾ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರೀಶ್ ರಾವತ್, ಕುಮಾರಿ ಸೆಲ್ಜಾ, ಮುಕುಲ್ ವಾಸ್ನಿಕ್, ಅರವಿಂದ್ ಪಾಂಡೆ, ಕೆ.ಸಿ.ವೇಣುಗೋಪಾಲ್, ದೀಪಕ್ ಬಾಬರಿಯಾ, ತರ್ಮದ್ವಾಜ್ ಸಾಹು, ರಘುವೀರ್ ಮೀನಾ, ಗೈಖಾಂಗಮ್, ಅಶೋಕ್ ಗೆಹ್ಲೋಟ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Comments