ಕುಮಾರಣ್ಣನಿಂದ ವಿಶೇಷ ಚೇತನ ಶಾಲಾ ಮಕ್ಕಳಿಗೂ ಸಿಕ್ತು ಈ ಭಾಗ್ಯ..!
ರಾಜ್ಯದಲ್ಲಿರುವ ವಿಶೇಷ ಚೇತನ ಮತ್ತು ಮಾನಸಿಕ ವಿಕಲಾಂಗ ಮಕ್ಕಳ ಶಾಲೆಗೂ ಕೂಡ ನ್ನು ಮುಂದೆ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.
ರಾಜ್ಯದ ವಿಶೇಷ ಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ಪಂದನ-2018 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲಿ ಅಧಿಕೃತ ಆದೇಶ ಹೊರಬೀಳಿದೆ ಎಂದು ತಿಳಿಸಿದರು. ವಿಶೇಷ ಚೇತನರಿಗೆ ಸರ್ಕಾರದಿಂದ ದೊರಕುತ್ತಿರುವ ಯಾವುದೇ ಸೌಲಭ್ಯ ಮತ್ತು ಸವಲತ್ತುಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಅಲ್ಲದೇ ಈ ಸಂಬಂಧ ಯಾವುದೇ ರೀತಿಯಲ್ಲೂ ಭ್ರಷ್ಟಾಚಾರವಾದರೂ ಸಹಿಸುವುದಿಲ್ಲ. ಅಲ್ಲದೇ ಅಂತಹವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಯಾವುದೇ ದೂರು ಕೇಳಿಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಮುಂದಿನ ವರ್ಷ ವಿಶ್ವಮಟ್ಟದ ಒಲಂಪಿಕ್ ಕ್ರೀಡಾಕೂಟ ಮಂಗಳೂರಿನಲ್ಲಿ ನಡೆಯಲಿದೆ. 2016ರ ಕಾಯಿದೆ ಅಡಿ 21 ರೀತಿಯ ವಿಶೇಷ ಚೇತನರಿಗೆ ನಾನಾ ವಿಧದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟಕ್ಕಾಗಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು. ರಾಷ್ಟ್ರೀಯ ವಿಶೇಷಚೇತನ ಹಣಕಾಸು ನಿಗಮದ ವತಿಯಿಂದ ನೀಡಿರುವ ಸಾಲದ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದಕ್ಕಾಗಿ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
Comments