ವಾಹನ ಸವಾರರಿಗೆ ಬಿಗ್ ಶಾಕ್ : ಜುಲೈ 16 ರಿಂದ ಪೆಟ್ರೋಲ್ -ಡೀಸೆಲ್ ದರ ಹೆಚ್ಚಳ ಎಷ್ಟು ಗೊತ್ತಾ?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿರುವ ಕಾರಣ ಅವುಗಳ ದರ ಜುಲೈ 16 ರ (ಸೋಮವಾರ) ಮಧ್ಯರಾತ್ರಿಯಿಂದ ಏರಿಕೆಯಾಗಲಿದೆ.
ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಅನ್ನು ಶೇಕಡ ಎರಡರಷ್ಟು ಏರಿಕೆ ಮಾಡಲಾಗಿದ್ದು, ಇದರಿಂದಾಗಿ ಪೆಟ್ರೋಲ್ ದರದಲ್ಲಿ 1.14 ರೂ. ಹಾಗೂ ಡೀಸೆಲ್ ದರದಲ್ಲಿ 1.12 ರೂ. ಏರಿಕೆಯಾಗಲಿದೆ. ಧನ ವಿನಿಯೋಗ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿದ್ದು, ಇಂದು ಶನಿವಾರ ಹಾಗೂ ನಾಳೆ ಭಾನುವಾರವಾಗಿರುವ ಕಾರಣ ಸೋಮವಾರ ಅಂಕಿತ ಬೀಳುವ ಸಾಧ್ಯತೆಯಿದೆ. ವಿದ್ಯುತ್ ಬಳಕೆ ಮೇಲಿನ ತೆರಿಗೆಯನ್ನು ಶೇ. 6 ರಿಂದ ಶೇ. 9 ಕ್ಕೆ ಹೆಚ್ಚಿಸುವ ನಿರ್ಧಾರದಿಂದ ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ 10 ಪೈಸೆಯಿಂದ 20 ಪೈಸೆಗೆ ಹೆಚ್ಚಳವಾಗಲಿದೆ. ಮದ್ಯದ ಎಲ್ಲ ಘೋಷಿತ 18 ಸ್ಲ್ಯಾಬ್ ಗಳ ಮೇಲೆ ಶೇ. 4 ಸರಷ್ಟು ತೆರಿಗೆ ಜಾಸ್ತಿ ಮಾಡಿದ್ದರಿಂದ ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.
Comments