ಬಿಗ್ ಬ್ರೇಕಿಂಗ್ : ಸರ್ಕಾರಿ ನೌಕರರಿಗೆ ಬಿಗ್ ಶಾಕ್ ಕೊಟ್ಟ ಬಿಎಂಟಿಸಿ..!
ಬಿಎಂಟಿಸಿಯ ನಾಲ್ಕು ನಿಗಮಗಳ ನಿರ್ವಹಣೆಗೆ ಕೇಳಿದ್ದ 1000 ಕೋಟಿಯಾದರೂ ಆದರೆ, ಸರ್ಕಾರದಿಂದ ಸಿಕ್ಕಿದ್ದು 100 ಕೋಟಿ ರೂ. ಹೀಗಾಗಿ ನಿಗಮಕ್ಕೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಲು ಬಿಎಂಟಿಸಿ ಮುಂದಾಗಿದ್ದಾರೆ.
ಬಿಎಂಟಿಸಿ ತನ್ನ ನೌಕರರಿಗೆ ಬಿಗ್ ಶಾಕ್ ನೀಡಿದ್ದು, ಬಿಎಂಟಿಸಿ ತನಗಾಗುತ್ತಿರುವ ನಷ್ಟ ತುಂಬಲು ಸರ್ಕಾರಿ ನೌಕರರಿಗೆ ನೀಡುತ್ತಿದ್ದ ಪಾಸ್ ಸೌಲಭ್ಯ ಕಡಿತಗೊಳಿಸುತ್ತಿದೆ ಎನ್ನಲಾಗುತ್ತಿದೆ. ವಿವಿಧ ಇಲಾಖೆಗಳ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ರಿಯಾಯತಿ ಪಾಸ್ ಸೌಲಭ್ಯವನ್ನು ಬಿಎಂಟಿಸಿ ಹಿಂಪಡೆದಿದೆ. ಹಾಗೂ ಬಿಎಂಟಿಸಿ ಪ್ರಯಾಣ ದರವನ್ನೂ ಹೆಚ್ಚಿಸುವ ಸಾಧ್ಯತೆಗಳಿವೆ. ಶೀಘ್ರದಲ್ಲೇ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅಧಿಕೃತವಾಗಿ ದರ ಏರಿಕೆ ಘೋಷಿಸಲಿದ್ದಾರೆ ಎನ್ನಲಾಗಿದೆ.
Comments