ಬಿಗ್ ಬ್ರೇಕಿಂಗ್ : ಡಿ.ಕೆ. ರವಿ, ಎಂ.ಕೆ.ಗಣಪತಿ ಕೇಸ್ ನಲ್ಲಿ ಹೊಸ ತಿರುವು ಕೊಟ್ಟ ಸಿಎಂ ಎಚ್’ಡಿಕೆ
ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ ಹಾಗೂ ಡಿವೈಎಸ್‌ಪಿಯಾಗಿದ್ದ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿದ್ದ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದು, ಕ್ಲೀನ್‌ಚಿಟ್ ನೀಡಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾರ್ಪಣೆ ಪ್ರಸ್ತಾವದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, 'ಡಿ.ಕೆ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೀಡಿರುವ ವರದಿಯಲ್ಲಿ ಜಾರ್ಜ್ ಪಾತ್ರವಿಲ್ಲ. ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಜಾರ್ಜ್ ಆವರ ಪಾತ್ರ ಇಲ್ಲ' ಎಂದು ತಿಳಿಸಿದರು. ಹೌದು.. ನಾನು ಹಿಂದೆ ಪ್ರತಿಪಕ್ಷದಲ್ಲಿದ್ದ ವೇಳೆ ಡಿ.ಕೆ.ರವಿ ಮತ್ತು ಎಂ.ಕೆ.ಗಣಪತಿ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂಬ ಒತ್ತಾಯ ಮಾಡಿದ್ದೆ. ಆಗ ಜಾರ್ಜ್ ಅವರ ವಿರುದ್ಧವೂ ಟೀಕೆ ಮಾಡಿದ್ದೆ. ಹಾಗಂತ ಈಗ ನಾನೇನು ಜಾಜ್‌ರ್ ಅವರನ್ನು ವಹಿಸಿಕೊಂಡು ಮಾತನಾಡುತ್ತಿಲ್ಲ. ಹಿಂದೆಯೇ ಅವರು ಒಮ್ಮೆ ರಾಜಿನಾಮೆ ನೀಡಿದ್ದರು. ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ವರದಿಗಳ ಆಧಾರದ ಮೇಲೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಾಜ್‌ರ್ ಅವರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವ ಬಗ್ಗೆ ಸಮರ್ಥನೆ ನೀಡಿದರು. ಪ್ರತಿಪಕ್ಷದಲ್ಲಿದ್ದಾಗ ಸರ್ಕಾರವನ್ನು ಕೆಣಕುವ ಉದ್ದೇಶದಿಂದ ಟೀಕೆ ಮಾಡುವುದು ಸಹಜ ಎಂದೂ ಕುಮಾರಸ್ವಾಮಿ ಇದೇ ವೇಳೆ ಸಮಜಾಯಿಷಿ ಕೊಟ್ಟರು.
Comments