ಮೈತ್ರಿ ಸರ್ಕಾರದ ಬಗ್ಗೆ ಹೇಳಿಕೆ ನೀಡಿದ ಸದಾನಂದ ಗೌಡಗೆ ಖಡಕ್ ತಿರುಗೇಟು ಕೊಟ್ಟ ಸಚಿವ ಡಿಕೆಶಿ..!ಎಚ್'ಡಿಕೆ ಪರ ನಿಂತ ಡಿಕೆಶಿ..!
ರಾಜ್ಯದಲ್ಲಿ ಶೀಘ್ರ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಡಿ.ಕೆ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಶೀಘ್ರ ಮೈತ್ರಿ ಸರ್ಕಾರ ಪತನಗೊಳ್ಳಬಹುದು ಎಂದು ಡಿ.ವಿ ಸದಾನಂದ ಗೌಡ ಹೇಳಿದ್ದಾರೆ, ಸದಾನಂದಗೌಡರು ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು. ಸದಾನಂದಗೌಡರು ಬಹಳ ಸಂತೋಷವಾಗಿದ್ದಾರೆ, ಅವರು ಆನಂದವಾಗಿರಲಿ. ಬಜೆಟ್ ಬಗ್ಗೆ ಕೇವಲ ರಾಜಕೀಯ ಕಾರಣದಿಂದ ಟೀಕೆ ಮಾಡಲಾಗುತ್ತಿದೆ, ರಾಜ್ಯ ಬಜೆಟ್ ಅತ್ಯಂತ ಶಕ್ತಿಶಾಲಿಯಾಗಿದೆ ಎಂದ ಅವರು ಎಚ್'ಡಿಕೆ ಪರ ನಿಂತ ಡಿಕೆಶಿ.
Comments