ಮೈತ್ರಿ ಸರ್ಕಾರ ಪತನ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಬಿಜೆಪಿ ನಾಯಕ ಡಿ.ವಿ ಸದಾನಂದಗೌಡ..!

ಶೀಘ್ರವೇ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಲಿದೆ ಅಂತ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಭವಿಷ್ಯ ನುಡಿದಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕ್ಷಣದಲ್ಲಿ ಬೇಕಾದ್ರೂ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರ ಪತವಾಗಬಹುದು, ತಮ್ಮ ಅಧಿಕಾರದ ಸಲುವಾಗಿ ಇಬ್ಬರು ಕೂಡ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದು, ಅಡಳಿತ ಯಂತ್ರ ನಿಂತಿದೆ.
ಅಧಿಕಾರಿಗಳ ಮೇಲೆ ಯಾರೋಬ್ಬರ ಹಿಡಿತವಿಲ್ಲ ಹೀಗಾಗಿ, ಅಧಿಕಾರಿಗಳು ಮನಸ್ಸಿಗೆ ಬಂದ ಹಾಗೇ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕರಾವಳಿ ಸೇರಿದಂತೆ ಅನೇಕ ಭಾಗಗಳಲ್ಲಿ ನಷ್ಟವಾಗಿದ್ದು, ಇಲ್ಲಿ ತನಕ ಯಾವುದೇ ಸಭೆಯನ್ನು ಸರ್ಕಾರ ನಡೆಸಿಲ್ಲ, ಮಳೆಯಿಂದ ಹಾನಿಗೊಳಗದಾವರಿಗೆ ಸರ್ಕಾರ ಯಾವುದೇ ಸಹಾಯವನ್ನು, ಪರಿಹಾರವನ್ನು ನೀಡಿಲ್ಲ ಅಂತ ದೋಸ್ತಿ ಸರ್ಕಾರದ ವಿರುದ್ದ ಹರಿಹಾಯ್ದರು.
Comments