Breaking News : ಸಮನ್ವಯ ಸಮಿತಿ ಸದಸ್ಯರಾಗಿ ‘ಕೈ’ ಪಕ್ಷದ ಮತ್ತೊಬ್ಬ ನಾಯಕ ಸೇರ್ಪಡೆ..! ಹಾಗಾದ್ರೆ ಜೆಡಿಎಸ್ ನಿಂದ ಯಾರು ಗೊತ್ತಾ?



ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಸದಸ್ಯರಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ದಿನೇಶ್ ಗುಂಡೂರಾವ್ ಅವರು ನೇಮಕಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನೇಮಿಸಿರುವ ಸಮನ್ವಯ ಸಮಿತಿಯಲ್ಲಿ ಪರಮೇಶ್ವರ್, ಸಿದ್ದರಾಮಯ್ಯ ಜೊತೆಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಜೆಡಿಎಸ್ ನಿಂದ ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಸೇರಿದಂತೆ ಕಾಂಗ್ರೆಸ್ ನಿಂದ ಮೂವರು ಹಾಗೂ ಜೆಡಿಎಸ್ ನಿಂದ ಇಬ್ಬರು ಸಮನ್ವಯ ಸಮಿತಿಯಲ್ಲಿದ್ದರು. ಇದೀಗ ಸಮನ್ವಯ ಸಮಿತಿಗೆ ದಿನೇಶ್ ಗುಂಡೂರಾವ್ ಅವರನ್ನು ನೇಮಿಸಿದರೆ ಕಾಂಗ್ರೆಸ್ ನಿಂದ ನಾಲ್ವರು ಸದಸ್ಯರಾಗಲಿದ್ದಾರೆ. ಹೀಗಾಗಿ ಜೆಡಿಎಸ್ ನಿಂದಲೂ ಮತ್ತೊಬ್ಬರೂ ನೇಮಕವಾಗುವ ಸಾದ್ಯತೆಗಳಿವೆ ಎನ್ನಲಾಗಿದೆ.
Comments