ವಿಧಾನಸಭಾ ಚುನಾವಣೆ ಬಗ್ಗೆ ಶಾಕಿಂಗ್ ವಿಷಯ ಬಿಚ್ಚಿಟ್ಟ ಮಾಜಿ ಸಚಿವ ಅಂಬರೀಷ್..! ಲೋಕಸಭೆ ಚುನಾವಣೆಗೆ ಸ್ಪರ್ಧೆ?

ನಾನು ಚುನಾವಣಾ ಅಖಾಡದಲ್ಲಿದ್ದಿದ್ದರೆ ಕಾಂಗ್ರೆಸ್ ಮಂಡ್ಯದಲ್ಲಿ ಹೀನಾಯವಾಗಿ ಸೋಲುತ್ತಿರಲಿಲ್ಲ, ಚುನಾವಣೆ ಗೂ ಮುನ್ನ ನಾನು ಜೆಡಿಎಸ್ ಜೊತೆ ಕೈ ಜೋಡಿಸಿರಲಿಲ್ಲ ಅಂತಹ ಲುಚ್ಚ ಕೆಲಸ ನಾನು ಎಂದಿಗೂ ಮಾಡಲ್ಲ ಅಂತ ನಟ, ಮಾಜಿ ಸಂಸದ, ಮಾಜಿ ಸಚಿವ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಜೊತೆಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದರೂ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಹಿರಿಯ ನಟ ಅಂಬರೀಷ್ ಹೇಳಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಗೆ ತಾವು ಈಗಲೂ ಅನಿವಾರ್ಯ ಎಂದಿದ್ದಾರೆ. ನಾನೇನಿದ್ದರೂ ಸ್ಟ್ರೈಟ್ ಫಾರ್ವರ್ಡ್. ಲೋಕಸಭೆ ಚುನಾವಣೆ ಸಂದರ್ಭ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಒಳ್ಳೆಯದು ಅಂತ ಮಾಜಿ ಸಚಿವ ಅಂಬಿ ಹೇಳಿದ್ದಾರೆ.
Comments