ಬಿಗ್ ಬ್ರೇಕಿಂಗ್ : ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಗೆ ಬಿಗ್ ಶಾಕ್..!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕಷ್ಟೇ ಸೀಮಿತಗೊಳಿಸಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಲಾಗುತ್ತಿದೆ ಅಂತ ಹೇಳಲಾಗಿದ್ದು, ಈ ಮೂಲಕ ಸಿದ್ದರಾಮಯ್ಯಗೆ ಸಿಎಲ್‌ಪಿ ಸ್ಥಾನದಿಂದಲೂ ಕೊಕ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಲಾಪ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ನಿಭಾಯಿಸಬೇಕಾದ ಎಲ್ಲ ಜವಾಬ್ದಾರಿಗಳನ್ನು ಸಿದ್ದರಾಮಯ್ಯ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಸಕಾಂಗ ಪಕ್ಷದ ಸಭೆ ನಡೆಯುವ ದಿನ ಹೊರತುಪಡಿಸಿ ಉಳಿದ ಹೊಣೆಗಾರಿಕೆಯಿಂದ ಅವರು ದೂರ ಉಳಿಯುತ್ತಿದ್ದಾರೆ. ಇದಲ್ಲದೇ ಪಕ್ಷದ ಹೀನಾಯ ಸೋಲು ಹಾಗೂ ಚಾಮುಂಡೇಶ್ವರಿಯಲ್ಲಿನ ಸೋಲಿನ ನಂತರ ಕೂಡ ಸಿದ್ದರಾಮಯ್ಯ ತಮ್ಮ ರಾಜಕೀಯ ನಡವಳಿಕೆಗಳನ್ನು ತಿದ್ದುಕೊಳ್ಳುವುದಕ್ಕೆ ಮುಂದಾಗಿಲ್ಲ, ಹೀಗಾಗಿ ರಾಜಕೀಯವಾಗಿ ಅವರನ್ನು ಬದಲಾವಣೆ ಮಾಡುವುದಕ್ಕೆ ಪಕ್ಷದಲ್ಲಿ ಕೆಲವು ನಿರ್ಧಾರ ಮಾಡಿದ್ದು, ಈ ಬಗ್ಗೆ ಪಕ್ಷದ ಹೈ ಕಮಾಂಡ್ ಗೆ ಈ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ರವಾನೆ ಮಾಡಲಾಗುತ್ತಿದೆ ಎನ್ನಲಾಗಿದೆ.
Comments