ಮೈತ್ರಿ ಸರ್ಕಾರದ ಮುಖ್ಯ ಸಚೇತಕರನ್ನಾಗಿ ಚಿಕ್ಕೋಡಿ ಶಾಸಕ ಗಣೇಶ್ ಬಿ.ಹುಕ್ಕೇರಿ ನೇಮಕ
ಮೈತ್ರಿ ಸರ್ಕಾರದ ಮುಖ್ಯ ಸಚೇತಕರನ್ನಾಗಿ ಚಿಕ್ಕೋಡಿ ಶಾಸಕ ಗಣೇಶ್ ಬಿ.ಹುಕ್ಕೇರಿ ಅವರನ್ನು ನೇಮಿಸಲಾಗಿದೆ. ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ನೂತನ ಸಚೇತಕರ ನೇಮಕವನ್ನು ಪ್ರಕಟಿಸಿದರು.
ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರರಾಗಿರುವ ಗಣೇಶ್ ಹುಕ್ಕೇರಿ ಅವರು ಎರಡನೆ ಬಾರಿಗೆ ಶಾಸಕರಾಗಿದ್ದಾರೆ. ಎಂ,ಬಿ.ಎ ಪದವೀಧರರಾಗಿರುವ ಗಣೇಶ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸುವ ಮೂಲಕ ಸಮಾಧಾನಪಡಿಸಲಾಗಿದೆ. ಈ ಮೂಲಕ ಸರ್ಕಾರಿ ಮುಖ್ಯ ಸಚೇತಕರ ಹುದ್ದೆ ಎರಡನೆ ಬಾರಿಯೂ ಬೆಳಗಾವಿ ಪಾಲಾಗಿದೆ.
Comments