ಅಬಕಾರಿ ಇಲಾಖೆಗೆ ಬಿಸಿ ಮುಟ್ಟಿಸಿದ ಸಿಎಂ ಕುಮಾರಸ್ವಾಮಿ
ಬಾರ್ ಮತ್ತು ವೈನ್ ಸ್ಟೋರ್ ಗಳ ನವೀಕರಣ ಲಂಚಕ್ಕೆ ಬ್ರೇಕ್ ಹಾಕಲು ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇಲ್ಲಿಯವರೆಗೂ ಕೂಡ ಯಾವುದೆ ಒಂದು ಬಾರ್ ಮತ್ತು ವೈನ್ ಸ್ಟೋರ್ ಗಳ ನವೀಕರಣ ಆಗಿಲ್ಲ. ಈಗಾಗಲೇ ಅಂದರೆ ಜೂನ್ 30 ಕ್ಕೆ ಲೈಸೆನ್ಸ್ ಮುಗಿದಿದ್ದು, ಜೂನ್ 1 ರಿಂದ ಹೊಸ ಲೈಸೆನ್ಸ್ ಇರಬೇಕು. ಲೈಸೆನ್ಸ್ ಇದ್ದರೆ ಮಾತ್ರ ಬಾರ್ ಮತ್ತು ವೈನ್ ಸ್ಟೋರ್ ಗಳಿಗೆ ಪಾನೀಯ ನಿಗಮದಿಂದ ಮಧ್ಯ ಪೂರೈಕೆ ಆಗುತ್ತದೆ.
ರಾಜ್ಯದಲ್ಲಿ ಹತ್ತುಸಾವಿರದ ಐವತ್ತು ಬಾರ್ ಮತ್ತು ವೈನ್ ಸ್ಟೋರ್ ಗಳಿದ್ದು ಈ ಮೊದಲು ಎಕ್ಸೈಜ್ ಇನ್ಸ್ ಪೆಕ್ಟರ್ ಗಳ ಮೂಲಕ ಲೈಸೆನ್ಸ್ ದಂದೆ ನಡೆಯುತ್ತಿತ್ತು. ಲೈಸೆನ್ಸ್ ರಿನಿವಲ್ ನೆಪದಲ್ಲಿ ಬಾರ್ ನಿಂದ ಒಂದು ಲಕ್ಷ, ವೈನ್ ಸ್ಟೋರ್ ನಿಂದ ಐವತ್ತು ಸಾವಿರ ಲಂಚ ವಸೂಲಿಯನ್ನು ಮಾಡಲಾಗುತ್ತಿತ್ತು. ಇನ್ಸ್ ಪೆಕ್ಟರ್ ಗಳ ಲಂಚಕ್ಕೆ ಕಡಿವಾಣ ಹಾಕಲು ಸಿಎಂ ಕುಮಾರಸ್ವಾಮಿ ರಿನಿವಲ್ ಪ್ರಕ್ರಿಯೆಗೆ ಆನ್ ಲೈನ್ ನಿಗಮವನ್ನು ತಂದಿದ್ದಾರೆ. ಇದರಿಂದಾಗಿ ಈಗಾಗಲೇ ಕೆಲವು ಬಾರ್ ಮುಚ್ಚಿವೆ. ಹಳೆ ಮಾಲ್ ಇಟ್ಟುಕೊಂಡು ಕೆಲ ಬಾರ್ ನಲ್ಲಿ ವ್ಯಾಪರ ಮಾಡಲಾಗುತ್ತಿದೆ. ಇನ್ನೊಂದೆರಡು ದಿನದಲ್ಲಿ ಸ್ಟಾಕ್ ಖಾಲಿಯಾದರೆ ರಾಜ್ಯದಲ್ಲಿ ಲಿಕ್ಕರ್ ಕೊರತೆ ಉಂಟಾಗುತ್ತದೆ.ಲಂಚವಿಲ್ಲದೆ ಲೈಸೆನ್ಸ್ ನವೀಕರಿಸುವ ಆನ್ ಲೈನ್ ವ್ಯವಸ್ಥೆಯನ್ನು ಸಿಎಂ ತಂದಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿದಂತಹ ದಂಧೆಗೆ ಕಡಿವಾಣ ಬೀಳಲಿದೆ
Comments