ಕೊನೆಗೂ ಜಮೀರ್‌ಗೆ ಅಹಮದ್ ಗೆ ಸಿಕ್ತು ಈ ಲಕ್ಸುರಿ ಕಾರ್..!

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್ ಅವರು ಕೊನೆಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದಂತಹ ಫಾರ್ಚೂನರ್ ಕಾರು ಪಡೆದಿದ್ದಾರೆ.
ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಯಾದ ಬಳಿಕ ಅವರು ಸರ್ಕಾರಕ್ಕೆ ಒಪ್ಪಿಸಿದ್ದ ಕಾರನ್ನು ಪಡೆಯಲು ಆಹಾರ ಸಚಿವರಾದ ಜಮೀರ್ ಅಹಮದ್‌ಖಾನ್ ತೀವ್ರ ಲಾಬಿ ನಡೆಸಿದ್ದರು. ತಮಗೆ ನೀಡಿದ್ದ ಇನ್ನೋವಾ ಕಾರು ಬದಲಿಗೆ ಫಾರ್ಚೂನರ್ ಕಾರು ಬೇಕು ಎಂದು ಮನವಿಯನ್ನು ಕೂಡ ಮಾಡಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ವಿವರಣೆಯನ್ನೂ ನೀಡಿದ್ದ ಅವರು, ನನಗೆ ಮೊದಲಿನಿಂದಲೂ ದೊಡ್ಡ ಕಾರಿನಲ್ಲಿ ಓಡಾಡಿಯೇ ಅಭ್ಯಾಸ. ಹೀಗಾಗಿ ಹಳೆಯ ಫಾರ್ಚೂನರ್ ಕಾರು ಕೇಳಿದ್ದೇನೆ. ಸಿದ್ದರಾಮಯ್ಯ ಅವರು ಬಳಸಿದ್ದಂತಹ ಕಾರು ಆದರೆ ಇನ್ನೂ ಉತ್ತಮ ಎಂದಿದ್ದೇನೆ ಎಂದು ಸ್ಪಷ್ಟನೆಯನ್ನು ನೀಡಿದ್ದರು.
Comments