ಬಿಗ್ ಬ್ರೇಕಿಂಗ್: ಲೋಕಸಭೆ ಚುನಾವಣಾ ಅಖಾಡಕ್ಕೆ ಜಾಗ್ವಾರ್ ಎಂಟ್ರಿ…! ಯಾವ ಕ್ಷೇತ್ರದಿಂದ ಗೊತ್ತಾ..?

ಈಗಷ್ಟೆ ರಾಜ್ಯ ವಿಧಾನ ಸಭಾ ಚುನಾವಣೆಯ ಕಾವು ತಣ್ಣಗಾದ ಬಳಿಕ ಲೋಕಸಭೆ ಚುನಾವಣೆ ಶುರುವಾಗುತ್ತಿದೆ. ಸಿಎಂ ಕುಮಾರ ಸ್ವಾಮಿ ಪುತ್ರ, ನಟ ನಿಖಿಲ್ ಗೌಡ ಲೋಕಸಭಾ ಚುನಾವಣೆಗೆ ಎಂಟ್ರಿ ನೀಡಲಿದ್ದು ತುಮಕೂರು ಲೋಕಸಭೆಯಿಂದ ಕಣಕ್ಕಿಳಿಯಲಿದ್ದಾರೆ ಎನ್ನುವ ಸ್ಪೋಟಕ ಮಾಹಿತಿಯನ್ನು ಮಾಜಿ ಸಚಿವ ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಚೆನ್ನಿಗಪ್ಪ ತುಮಕೂರಿನಲ್ಲಿ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ ನಿಖಿಲ್ ಗೌಡ ಸ್ಪರ್ಧೆಗೆ ಆಹ್ವಾನ ನೀಡಿದ್ದೇವೆ. ಭವಾನಿ ರೇವಣ್ಣ ಬಂದ್ರು ಸಹ ನಮ್ಮ ಅಭ್ಯಂತರವಿಲ್ಲ, ಅಂತಿಮವಾಗಿ ಜಿಲ್ಲಾ ಲೋಕಸಭಾ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುವುದು ಎನ್ನುವುದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಶಾಸಕ ಗೌರಿಶಂಕರ್ ಗೆ ಸಚಿವ ಸ್ಥಾನ ಕೊಡಬೇಡಿ., ನಮ್ಮ ಹುಡ್ಗ ಇನ್ನೂ ಚಿಕ್ಕವನು ಅಂತಾ ನಾನೇ ವರಿಷ್ಠರಿಗೆ ಹೇಳಿದ್ದೇನೆ ಹೀಗಾಗಿ ಗೌರಿ ಶಂಕರ್ ಗೆ ಸಚಿವ ಸ್ಥಾನವನ್ನು ನೀಡಲಾಗಿಲ್ಲ ಎಂದು ತಿಳಿಸಿದರು.
Comments