ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಗೆ ಬಹಿರಂಗ ಸವಾಲೆಸೆದ ಒವೈಸಿ..! ಮೋದಿಯ ಮುಂದಿನ ನಡೆ..!?

30 Jun 2018 3:20 PM | Politics
442 Report

ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ತಾಕತ್ತಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೈದರಾಬಾದ್‍ನಿಂದ ಸ್ಪರ್ಧಿಸಲಿ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾವುದ್ದೀನ್ ಒವೈಸಿ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಹೈದರಾಬಾದ್ ನಲ್ಲಿ ನಡೆದ ತಮ್ಮ ಪಕ್ಷದ 60ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹೈದರಾಬಾದ್‍ನ್ನು ನನ್ನಿಂದ ಕಿತ್ತುಕೊಳ್ಳಲು ಯಾವ ಪಕ್ಷಗಳಿಗೂ ಸಾಧ್ಯವಿಲ್ಲ. ನಿಮ್ಮ ಸಂಪೂರ್ಣ ಬಲವನ್ನು ಒಗ್ಗೂಡಿಸಿ ನನ್ನವಿರುದ್ಧ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಮೋದಿ ಮತ್ತು ಅಮಿತ್ ಷಾ ಅವರನ್ನು ಅಖಾಡಕ್ಕೆ ಆಹ್ವಾನಿಸಿದ್ದಾರೆ.  ಇದೆ ವೇಳೆ ಕಾಂಗ್ರೆಸ್ ಗೂ ಕೂಡ ಈ ವೇಳೆ ಅವರು ಸವಾಲು ಹಾಕಿದ್ದು, ಈ 2 ವಿರೋಧ ಪಕ್ಷಗಳು ಒಟ್ಟಾಗಿ ಇಲ್ಲಿ ಸ್ಪರ್ಧೆ ಮಾಡಿದರೂ ಕೂಡ ಇಲ್ಲಿ ನಮ್ಮ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೇನು ಲೋಕಸಭಾ ಚುನಾವಣೆಯೂ ಹತ್ತಿರ ಬರುತ್ತಿದ್ದು, ನಮ್ಮ ಜನರು ಬಿಜೆಪಿಗೆ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ಅಲ್ಲದೇ ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ಆಡಳಿತ ನೋಡಿದ್ದು, ಜನರ ಅಭಿವೃದ್ಧಿಗೆ ಕೆಲಸ ಮಾಡಿಲ್ಲ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

Edited By

Shruthi G

Reported By

Shruthi G

Comments