ಬಿಗ್ ಬ್ರೇಕಿಂಗ್ : ರೈತರ ಸಾಲಮನ್ನಾ ಹಿನ್ನಲೆ ಇವುಗಳ ಮೇಲೆ ಬೆಲೆ ಏರಿಕೆ..! ಯಾವ ವಸ್ತುವಿನ ಮೇಲೆ ಹೆಚ್ಚಳ?

ರೈತರ ಸಾಲಮನ್ನಾ ಮಾಡುವುದಕ್ಕೆ ಮೈತ್ರಿಕೂಟ ಸರ್ಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಪ್ಪಿಕೊಂಡಿದ್ದು ಈ ನಿಟ್ಟಿನಲ್ಲಿ ಎರಡು ಹಂತದಲ್ಲಿ ಸರ್ಕಾರ ಸಾಲ ಮನ್ನಾ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಈ ನಡುವೆ ಮೊದಲ ಹಂತವಾಗಿ 5 ಎಕರೆ ಹೊಂದಿರುವ ರೈತರಿಗೆ, 1 ಲಕ್ಷ ಆದಾಯವಿರುವ ಸಣ್ಣ ಹಾಗೂ ಅತಿ ಸಣ್ಣ ರೈತರ ಸಾಲಮನ್ನಾ ಮಾಡಲು ಮುಂದಾಗಿದೆ ಎನ್ನಲಾಗಿದೆ. ಇದೇ ವೇಳೆ ಸಾಲಮನ್ನಾದಿಂದ ಸರ್ಕಾರದ ಬೊಕ್ಕಸದ ಮೇಲೆ ಸರಿ ಸುಮಾರು 50 ಸಾವಿರ ಕೋಟಿಯಷ್ಟು ಉಂಟಾಗಲಿರುವ ನಷ್ಷವನ್ನು ತಡೆದುಕೊಳ್ಳುವ ಸಲುವಾಗಿ ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ದರವನ್ನು ಹೆಚ್ಚಳ ಮಾಡುವುದಕ್ಕೆ ಸರ್ಕಾರ ಮುಂದಾಗಲಿದೆ ಎನ್ನಲಾಗಿದೆ. ಇದಲ್ಲದೇ ಅನಗತ್ಯ ಕಡಿವಾಣ, ರಜಾದಿವಸಗಳಲ್ಲಿ ಇಂದಿರಾ ಕ್ಯಾಂಟಿನ್ ಗಳಿಗೆ ರಜಾ ಭಾಗ್ಯ, ಎಸ್ಕಾಂ, ಬೆಸ್ಕಾಂ ಗಳಿಗೆ ನೀಡಲಾಗುವ ಸರಿ ಸುಮಾರು 10 ಸಾವಿರ ಕೋಟಿ ಸಹಾಯ ಧನಕ್ಕೆ ಕೊಕ್. ಹಿಂದಿನ ಸರ್ಕಾರದ ಲ್ಯಾಪ್ ಟಾಪ್ ಭಾಗ್ಯಕ್ಕೆ ವಿದಾಯ ನೊಂದಣಿ ಶುಲ್ಕ ಹೆಚ್ಚಳ ಮಾಡುವುಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
Comments