'ಕೈ'-'ತೆನೆ' ಹಲವು ನಾಯಕರು ಬಿಜೆಪಿಗೆ ಬರಲು ಸಿದ್ದ : ಬಿ.ಎಸ್.ವೈ ಹೊಸ ಬಾಂಬ್

ಕಾಂಗ್ರೆಸ್-ಜೆಡಿಎಸ್ ನ ಹಲವು ನಾಯಕರು ನಮ್ಮ ಕಡೆ ಬರಲು ಸಿದ್ದರಿದ್ದು ನಮ್ಮ ಕುರ್ಚಿ ಅತಂತ್ರ ಎಂದು ಯೋಚಿಸದೇ ಅವರನ್ನು ಕರೆತಂದು ಪಕ್ಷ ಬಲಪಡಿಸಿ ಅಂತ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯ್ಯೂರಪ್ಪನವರು ಕರೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನಮ್ಮವರು ಮಾಧ್ಯಮಗಳ ಮುಂದೆ ಹೋಗುವಾಗ ಎಚ್ಚರಿಕೆಯಿಂದ ಹೋಗಿ, ಮಾತನಾಡುವ ಮುನ್ನ ಸಿದ್ದರಾಗಿ ಹೋಗಿ ಮಾಧ್ಯಮಗಳ ಮುಂದೆ ಏನೇನೋ ಮಾತನಾಡಬೇಡಿ ಎಂದು ಯಡಿಯೂರಪ್ಪ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಸಲಹೆ ನೀಡಿದರು. ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲುವ ಪಣ ತೊಟ್ಟು ಕೆಲಸ ಮಾಡಬೇಕು, ನಾಲ್ಕು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ, ಯೋಜನೆ ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು ಅಂತ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
Comments