ಬೆಂಗಳೂರಿಗೆ ಮರಳಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಉರುಳಿಸ್ತಾರಾ ಹೊಸ ದಾಳ..!?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಕಿತ್ಸೆಗೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದು ಎಲ್ಲರಿಗೂ ತಿಳಿದೆ ಇದೆ., ಹನ್ನೆರಡು ದಿನಗಳ ಚಿಕಿತ್ಸೆಯ ಬಳಿಕ ಬೆಂಗಳೂರಿಗೆ ಬಂದಿದ್ದರು.
ಶಾಂತಿವನದಲ್ಲಿ ವಿಶ್ರಾಂತಿಯಲ್ಲಿದ್ದಾಗಲೇ ಆಪ್ತರೊಂದಿಗೆ ಸಭೆ ನಡೆಸಿ ಮೈತ್ರಿ ಕೂಟ ಸರ್ಕಾರದ ಅಧಿಕಾರವದಿಯ ಕುರಿತು ಹೇಳಿಕೆ ನೀಡುವ ಮೂಲಕ ಶಾಕ್ ನೀಡಿದ್ದಂತಹ ಸಿದ್ದರಾಮಯ್ಯನವರು ಬೆಂಗಳೂರಿಗೆ ಆಗಮಿಸಿದ ನಂತರ ಬೇರೆ ಯಾವ ರೀತಿಯ ದಾಳವನ್ನು ಉರುಳಿಸಲಿದ್ದಾರೆಂಬುದು ರಾಜಕೀಯ ವಲಯದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಸುಗಮವಾಗಿ ನಡೆದುಕೊಂಡು ಹೋಗಲು ರಚಿಸಲಾದಂತಹ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ, ಜುಲೈ 5 ರಂದು ಬಜೆಟ್ ಮಂಡನೆಗೂ ಮುನ್ನ ನಡೆಯಲಿರುವ ಸಭೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬುದನ್ನು ಕಾದುನೋಡಲೇ ಬೇಕಿದೆ. ನೂತನ ಬಜೆಟ್ ಮಂಡನೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬಂದಿರುವಂತಹ ಸಿದ್ದರಾಮಯ್ಯ ಈಗಲೂ ಅದೇ ನಿಲುವನ್ನು ಮುಂದುವರೆಸಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದರ ಕುರಿತು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.
Comments