‘ಕೈ’ ಪಾಳಯಕೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್, ಸಿದ್ದಗೆ ಖಡಕ್ ವಾರ್ನಿಂಗ್..!

ಮೈತ್ರಿ ಸರ್ಕಾರದ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೈ ಹೈಕಮಾಂಡ್ ಗರಂ ಆಗಿದ್ದು, ಸರ್ಕಾರದ ವಿರುದ್ದ ಹೇಳಿಕೆ ನೀಡದಂತೆ ಖಡಕ್ ವಾರ್ನಿಂಗ್ ನೀಡಿದೆ ಎನ್ನಲಾಗಿದೆ.
ಸರ್ಕಾರದ ಕಾರ್ಯನಿರ್ವಹಣೆ ಕುರಿತು ಯಾವುದೇ ರೀತಿ ಭಿನ್ನಾಭಿಪ್ರಾಯಗಳು ಇದ್ದಲ್ಲಿ. ಆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲೇ ಚರ್ಚಿಸಬೇಕು. ವಿನಾಕಾರಣ ಮಾಧ್ಯಮಗಳ ಎದುರು ಹೇಳಿಕೆ ನೀಡಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಬದ್ಧ ವೈರಿಗಳ ಪಕ್ಷಗಳು ಸರ್ಕಾರ ರಚನೆ ನಿಟ್ಟಿನಲ್ಲಿ ಕೈಜೋಡಿಸಿದಾಗ ಹಲವು ಭಿನ್ನಾಭಿಪ್ರಾಯ ಬರುವುದು ಸಹಜ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಮಂಡನೆ ಕುರಿತು ಕಾಂಗ್ರೆಸ್ , ಜೆಡಿಎಸ್ ಮುಖಂಡರಿಂದ ಕೇಳಿ ಬಂದಿರುವ ಭಿನ್ನ ಹೇಳಿಕೆ ಅವಲೋಕಿಸಿ ರಾಹುಲ್ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
Comments