ಬಜೆಟ್ ಮಂಡನೆ ಕುರಿತು ಹೊಸ ಬಾಂಬ್ ಸಿಡಿಸಿದ ಸಿಎಂ ಎಚ್' ಡಿಕೆ
ನಾನು ಬಜೆಟ್ ಮಂಡಿಸುತೇನೋ, ಇಲ್ಲವೋ ಗೊತ್ತಿಲ್ಲ ಅಂತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಜೆಟ್ ಅನ್ನು ಮುಂದುವರಿಸಿಕೊಂಡು ಹೋದರೆ ಸರಿ ಸುಮಾರು 100 ಮಂದಿ ಶಾಸಕರಿಗೆ ತೊಂದರೆಯಾಗುತ್ತದೆ ಅಂತ ಅವರು ಹೇಳಿದರು. ಇದೇ ವೇಳೆ ಅವರು ಕೆಲವು ಲೋಕಸಭಾ ಚುನಾವಣೆ ಬಳಿಕ ಬಜೆಟ್ ಅನ್ನು ಮಂಡನೆ ಮಾಡಿ ಅಂತ ಹೇಳುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದರು. ನಾನು ಯಾರ ಹಂಗಿನಲ್ಲಿ ಇಲ್ಲ. ನಾನಗೆ ಯಾರು ಭಿಕ್ಷೆ ಕೊಟ್ಟಿಲ್ಲ .ಈ ಸರ್ಕಾರ ಎಷ್ಟು ದಿನ ಇರುತ್ತೋ ಇಲ್ಲವೋ ಗೊತ್ತಿಲ್ಲ ಅದಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಾಲ ಮನ್ನಾ ಮಾಡಬೇಡಿ ಅಂತಾ ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳುತ್ತಿರುವುದು ನನ್ನ ಗಮನಕ್ಕೂ ಬಂದಿದೆ ಅಂತ ಹೇಳಿದರು.
ಇದೇ ವೇಳೆ ಅವರು ಮಾತನಾಡಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಈಗಾಗಲೇ ಸಹಕಾರಿ ಬ್ಯಾಂಕ್ ಗಳಲ್ಲಿನ 8 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ. ಇನ್ನೂ 10 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಬೇಕು. ಮುಂದಿನ ಮಾರ್ಚ್ ಅಂತ್ಯದವರಗಿನ ಸಾಲ ಮನ್ನಾ ಮಾಡಬೇಕು ಎಂಬ ಒತ್ತಾಯವಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿರೋದ್ರಿಂದ 16,000 ಕೋಟಿ ರೂ. ಹೆಚ್ಚಿನ ಹೊರೆಯಾಗಿದ್ದು ರೈತರ ಸಾಲಮನ್ನ ಮಾಡುವುದು ಕಷ್ಟವಾಗಲಿದೆ ಅಂತ ಹೇಳಿದರು.
Comments