ಬಿಗ್ ಬ್ರೇಕಿಂಗ್ : ಪೋಲಿಸ್ ಅಧಿಕಾರಿಗಳಿಗೆ ಸಿ.ಎಂ ಖಡಕ್ ಎಚ್ಚರಿಕೆ..! ಕಾರಣ ಏನ್ ಗೊತ್ತಾ?

ವಿಜಯಪುರದ ಚಡಚಣ ಸಹೋದರರ ಕೇಸಿನಿಂದ ಕೇಳಿ ಬರಲಾಗುತ್ತಿರುವ ಪೋಲಿಸ್ ಅಧಿಕಾರಿಗಳ ಹೆಸರಿನಿಂದ ರಾಜ್ಯ ಪೋಲಿಸ್ ಅಧಿಕಾರಿಗಳನ್ನು ಜನರು ಅನುಮಾನದಿಂದ ನೋಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಇದರ ನಡುವೆ ಚಡಚಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಿತರ ಪ್ರಕರಣಗಳಲ್ಲಿ ಪೊಲೀಸರ ಹೆಸರು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಇಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದಂತಹ ಪೊಲೀಸ್ ಸಭೆಯಲ್ಲಿ ಕೊಲೆ ಮಾಡುವುದಕ್ಕೆ ನೀವೇ ಸುಪಾರಿ ತೆಗೆದುಕೊಳ್ಳುತ್ತಿದ್ದೀರಾ? ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋಲಿಸ್ ಇಲಾಖೆಯ ಮಾನವನ್ನು ಹರಾಜು ಹಾಕುತ್ತಿದ್ದೀರಾ? ನಿಮಗೆ ಏನು ಗೊತ್ತು ಆಗ್ತಾ ಇಲ್ಲ್ವಾ? ಗೊತ್ತು ಇದ್ದರು ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟು ಹಾಕುತ್ತಿರುವುದು ಏಕೆ ಅಂತ ಐಜಿಪಿ ರಾಮಚಂದ್ರರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Comments