ನಾಲ್ಕು ಮುಖ್ಯ ಸ್ಥಾನಗಳ ಬಗ್ಗೆ ಹೈಕಮಾಂಡ್ ಮಹತ್ವದ ನಿರ್ಧಾರ..! ಯಾರಿಗೆ ಯಾವ ಸ್ಥಾನ ಗೊತ್ತಾ? ಇಲಿದೆ ಕಂಪ್ಲೀಟ್ ಡೀಟೇಲ್ಸ್..

20 Jun 2018 12:44 PM | Politics
9729 Report

ಮುಂದಿನ 15 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದಾರೆ. ನಾಲ್ಕು ಮುಖ್ಯ ಸ್ಥಾನಗಳಿಗೆ ರೇಸ್‌ನಲ್ಲಿರುವ ಈ 9 ಮಂದಿ ಶಾಸಕರು..

ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ನಾಲ್ಕು ಮಂದಿಗೆ ಅವಕಾಶ ನೀಡುವ ಉದ್ದೇಶವನ್ನು ಕಾಂಗ್ರೆಸ್‌ ನಾಯಕತ್ವ ಹೊಂದಿದೆ ಎನ್ನಲಾಗಿದೆ. ಈ ಮೂಲಗಳ ಪ್ರಕಾರ ಲಿಂಗಾಯತ, ಪರಿಶಿಷ್ಟ(ಎಡಗೈ), ಕುರುಬ ಸಮುದಾಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಅಲ್ಲದೆ, ಅಸಮಾಧಾನಗೊಂಡಿರುವ ಹಿರಿಯರಿಗೆ ಅವಕಾಶ ನೀಡುವುದೋ ಅಥವಾ ಒಕ್ಕಲಿಗ ಸಮುದಾಯಕ್ಕೆ ಅವಕಾಶ ನೀಡುವುದೋ ಎಂಬ ಗೊಂದಲವಿದೆ. ಲಿಂಗಾಯತರ ಪೈಕಿ ಎಂ.ಬಿ.ಪಾಟೀಲ್‌ (ಅಥವಾ ಸಂಗಮೇಶ್ವರ್‌), ಕುರುಬರ ಪೈಕಿ ಸಿ.ಎಸ್‌. ಶಿವಳ್ಳಿ (ಒಂದು ವೇಳೆ ಸಚಿವ ಸಂಪುಟಕ್ಕೆ ಎಚ್‌.ಕೆ. ಪಾಟೀಲ್‌ ಅವರನ್ನು ತೆಗೆದುಕೊಂಡರೆ ಆಗ ದಕ್ಷಿಣ ಕರ್ನಾಟಕದಿಂದ ಎಂ.ಟಿ.ಬಿ. ನಾಗರಾಜ್‌ಗೆ ಅದೃಷ್ಟಖುಲಾಯಿಸಬಹುದು, ಪರಿಶಿಷ್ಟರ ಎಡಗೈ ಪಂಗಡದ ಪೈಕಿ ಆರ್‌.ಬಿ. ತಿಮ್ಮಾಪುರ ಮತ್ತು ಸಂಸದ ಕೆ.ಎಚ್‌. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್‌ ಅವರಿಬ್ಬರ ಪೈಕಿ ಒಬ್ಬರಿಗೆ ಅವಕಾಶ ದೊರೆಯಬಹುದು. ಇನ್ನು ನಾಲ್ಕನೆಯ ಸಚಿವ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕೋ ಅಥವಾ ಜಾತಿ ಮೀರಿ ಹಿರಿಯ ನಾಯಕರೊಬ್ಬರಿಗೆ ನೀಡಬೇಕೋ ಎಂಬ ಗೊಂದಲವಿದೆ. ಒಕ್ಕಲಿಗರಿಗೆ ಹುದ್ದೆ ನೀಡಬೇಕು ಎಂದು ನಿರ್ಧಾರವಾದರೆ ಆಗ ಎಂ.ಕೃಷ್ಣಪ್ಪ ಅವರಿಗೆ ಅದೃಷ್ಟಒಲಿಯಬಹುದು. ಜಾತಿ ಲೆಕ್ಕಾಚಾರ ಮೀರಿ ಹಿರಿಯ ಮುಖಂಡರಿಗೆ ನೀಡಬೇಕು ಎಂದು ತೀರ್ಮಾನಿಸಿದರೆ ಆಗ ಎಚ್‌.ಕೆ. ಪಾಟೀಲ್‌ ಅಥವಾ ರಾಮಲಿಂಗಾರೆಡ್ಡಿ ಪೈಕಿ ಒಬ್ಬರಿಗೆ ಹುದ್ದೆ ದೊರೆಯಬಹುದು ಎನ್ನಲಾಗುತ್ತಿದೆ. ಆದರೆ, ಇದು ಅಂತಿಮಗೊಳ್ಳುವುದು ನಿಗಮ ಮಂಡಳಿ ನೇಮಕಾತಿಯ ನಂತರವೇ ಎಂದು ಮೂಲಗಳು ತಿಳಿಸಿವೆ.

Edited By

Shruthi G

Reported By

Shruthi G

Comments