ಬಿನ್ನಿಪೇಟೆ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಜೆಡಿಎಸ್

20 Jun 2018 11:24 AM | Politics
525 Report

ಬೆಂಗಳೂರು ಮಹಾನಗರ ಪಾಲಿಕೆಯ  ಬಿನ್ನಿಪೇಟೆ ವಾರ್ಡ್‌ನಲ್ಲಿ  ನಡೆದ ಉಪಚುನಾವಣೆಯಲ್ಲಿ  ಜೆಡಿಎಸ್ ಗೆಲುವು ಸಾಧಿಸಿದೆ. ಇದರಿಂದ ಕಾಂಗ್ರೆಸ್‌ನ ನೆಲೆಯಾಗಿದ್ದ ಬಿನ್ನಿಪೇಟೆ, ಈಗ ಜೆಡಿಎಸ್‌ನ ಪಾಲಾಗಿದೆ.

ಇದರಿಂದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ತೀವ್ರ ರೀತಿಯಾಗಿ ಮುಖಭಂಗವಾಗಿದೆ. ದಿನೇಶ್ ಗುಂಡೂರಾವ್ ಅವರ ಶಿಷ್ಯರಾಗಿದ್ದ ಮಾಜಿ ಕಾರ್ಪೊರೇಟರ್ ಬಿಟಿಎಸ್ ನಾಗರಾಜ್, ಅವರಿಗೆ ಸವಾಲೆಸೆದು ಜೆಡಿಎಸ್‌ನಿಂದ ಮಗಳನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ನಾಗರಾಜ್ ಅವರು 7,188 ಮತಗಳನ್ನು ಪಡೆದು ಕಾಂಗ್ರೆಸ್  ಅಭ್ಯರ್ಥಿ ವಿದ್ಯಾ ಅವರನ್ನು 1939 ಮತಗಳಿಂದ ಸೋಲಿಸಿದ್ದಾರೆ. ವಿದ್ಯಾ 5249 ಮತಗಳನ್ನು ಪಡೆದರೆ, ಅವರು ಬಿಜೆಪಿ ಅಭ್ಯರ್ಥಿ ಚಾಮುಂಡೇಶ್ವರಿ ಅವರು 2455 ಮತಗಳನ್ನು ಗಳಿಸಿದ್ದಾರೆ. ಹಾಗಾಗಿ ಬೆಂಗಳೂರು ಮಹಾನಗರ ಪಾಲಿಕೆಯ  ಬಿನ್ನಿಪೇಟೆ ವಾರ್ಡ್‌ನಲ್ಲಿ  ನಡೆದ ಉಪಚುನಾವಣೆಯಲ್ಲಿ  ಜೆಡಿಎಸ್ ಗೆಲುವು ಸಾಧಿಸಿದೆ.

Edited By

Manjula M

Reported By

Manjula M

Comments