ಬಿಗ್ ಬ್ರೇಕಿಂಗ್: ಮಾಜಿ ಮುಖ್ಯಮಂತ್ರಿ ವಿರುದ್ದ FIR ದಾಖಲು,ಕಾರಣ ಏನ್ ಗೊತ್ತಾ..!?

18 Jun 2018 1:10 PM | Politics
1428 Report

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್​ ಐ ಆರ್​ ದಾಖಲೆ ಮಾಡಿಕೊಳ್ಳುವಂತೆ ಮೈಸೂರಿನ 2ನೇ ಸತ್ರ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯಲ್ಲಿ ತಮಗೆ ಬೇಕಾದವರಿಗೆ ನಿವೇಶನ ಮಂಜೂರು ಮಾಡಿಸಿದ್ದರು ಎಂದು ಸಿದ್ದರಾಮಯ್ಯನವರನ್ನು ಸೇರಿ ಅವರ ನಾಲ್ಕುಜನ ಆಪ್ತರ ಮೇಲು ಬರೋಬ್ಬರಿ 9 ಕ್ರಿಮಿನಲ್​ ಸೆಕ್ಷನ್​ಗಳ ಅಡಿಯಲ್ಲಿ ಕೇಸನ್ನು ದಾಖಲಿಸಿದ್ದಾರೆ. ಈ ಸಂಬಂಧವಾಗಿ ಲಕ್ಷ್ಮೀಪುರಂ ಪೊಲೀಸ್​ ಠಾಣೆಯಲ್ಲಿ ಸೆಕ್ಷನ್​ 120ಬಿ, 197, 166, 169, 200, 417, 420 ಮತ್ತು 468 ರ ಅಡಿಯಲ್ಲಿ ಪ್ರಕರಣವು ದಾಖಲಾಗಿದೆ. ಇದಕ್ಕೂ ಮುನ್ನ ಸಿದ್ದರಾಮಯ್ಯನವರು ವಿಜಯನಗರ ಎರಡನೇ ಹಂತದಲ್ಲಿ ಅಕ್ರಮವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆಯನ್ನು ಉಲ್ಲಂಘಿಸಿ ನಿವೇಶನ ಪಡೆದಿದ್ದರೂ ಎನ್ನುವ ಆರೋಪವೂ ಕೂಡ ಇದೆ.

Edited By

Manjula M

Reported By

Manjula M

Comments