ವಿಕ್ಟೋರಿಯಾ ಆಯ್ತು ,ಇದೀಗ ಕಿಮ್ಸ್ ಸರದಿ ..! ಕಿಮ್ಸ್ ಆಡಳಿತ ಮಂಡಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಿಕಿಶಿಯಿಂದ ಖಡಕ್ ಎಚ್ಚರಿಕೆ..!

ಕಿಮ್ಸ್ ಒಪಿಡಿ ಬಂದ್ ಮಾಡಿ ವಿವಿಧ ರೀತಿಯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ಕೂಡ ಯಾವ ರೋಗಿಗಳಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಕಿಮ್ಸ್ ಆಡಳಿತ ಮಂಡಳಿಗೆ ವೈದ್ಯಕೀಯ ಸಚಿವರು ತಿಳಿಸಿದ್ದಾರೆ. ಸಚಿವರ ಸೂಚನೆಯ ಹಿನ್ನೆಲೆಯಲ್ಲಿ ಕಿರಿಯ ವೈದ್ಯರನ್ನು ಬಳಸಿ ಕಿಮ್ಸ್ ಆಡಳಿತ ಮಂಡಳಿ ಒಪಿಡಿ ನಡೆಸುತ್ತಿದೆ. ಈ ಹಿಂದೆಯೂ 21 ದಿನ ವೈದ್ಯರು ಮುಷ್ಕರ ಹೂಡಿದ್ದಾಗ ಕಿರಿಯ ವೈದ್ಯರ ಸಹಾಯದಿಂದ ಆಸ್ಪತ್ರೆಯನ್ನು ನಡೆಸಲಾಗಿತ್ತು. ಇದೀಗ ಸಚಿವರ ಸೂಚನೆ ಮೇರೆಗೆ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ರೋಗಿಗಳಿಗೆ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲು ಕಿಮ್ಸ್ ಆಡಳಿತ ಮಂಡಳಿಯು ಇದೀಗ ಸಜ್ಜಾಗಿದೆ.
Comments