ಸಿದ್ದು ಹಾಕಿರುವ ಈ ಕಂಡೀಷನ್ ಗೆ ಶಾಕ್ ಆದ ಸಿಎಂ ಹೆಚ್’ಡಿಕೆ..!

ಮೈತ್ರಿ ಸರ್ಕಾರ ರಚನೆಯಾದ ಹಿನ್ನಲೆಯಲ್ಲಿ ಅಧಿಕಾರಕ್ಕೆ ಸಂಬಂಧಪಟ್ಟಂತೆ ಹಲವು ರೀತಿಯ ಕಂಡಿಷನ್ ಗಳನ್ನು ಹಾಕಿಕೊಳ್ಳುವುದು ಮಾಮೂಲಿ, ಇದಕ್ಕೆ ಕಾರಣ ಸಮ್ಮಿಶ್ರ ಸರ್ಕಾರದಲ್ಲಿ ಒಂದೇ ತೆರನಾಗಿ ನಡೆದುಕೊಂಡು ಹೋಗುವುದಕ್ಕೆ ಇಬ್ಬರಿಗೂ ಕಷ್ಟವಾಗುವುದು, ಆದ ಕಾರಣ ನಿಮ್ಮ ಖಾತೆಗೆ ನಾನು ತಲೆ ಹಾಕುವುದಿಲ್ಲ, ನಮ್ಮ ಖಾತೆಗೆ ನಾನು ತಲೆ ಹಾಕುವುದಿಲ್ಲ ಎನ್ನುವ ಅನೌಪಚಾರಿಕ ಒಪ್ಪಂದಗಳು ಬಾಯಿ ಮಾತಿನ ಮೂಲಕ ಆಗಿರುತ್ತದೆ. ಹಾಗೇ ಆ ಕೆಲಸಗಳು ನಡೆಯುತ್ತವೆ ಕೂಡ.
ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಸಿ.ಎಂ ಹೆಚ್.ಡಿಕೆ ಹಾಕಿರುವಂತ ಹೊಸದಾದ ಕಂಡಿಷನ್ವೊಂದು ವಿವಾದಕ್ಕೆ ಇದೀಗ ಕಾರಣವಾಗಿದೆ.ಈ ಕಂಡಿಷನ್ ಗೆ ಖುದ್ದು ಹೆಚ್.ಡಿಕೆಗೆ ಆಶ್ಚರ್ಯಗೊಂಡಿದ್ದಾರಂತೆ. ಎಸ್..ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್ ಡಿ ದೇವೇಗೌಡ ಅವರ ಮನೆಗೆ ಪದೇ ಪದೇ ಸಿಎಂ ಕುಮಾರಸ್ವಾಮಿ ಅವರು ಹೋಗಬಾರದು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಂಡಿಷನ್ ಹಾಕಿದ್ದಾರೆ ಎಂದು ತಿಳಿದು ಬರುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವಂತಹ ಕೆ.ಸಿ ವೇಣು ಗೋಪಾಲ್ ಅವರ ಮುಂದೆ ಸಿದ್ದರಾಮಯ್ಯ ಈ ಬೇಡಿಕೆ ಇಟ್ಟಿದ್ದು, ಸಮನ್ವಯ ಸಮಿತಿ ಸಭೆ ಬಳಿಕ ಹೈಕಮಾಂಡ್ ನಾಯಕರ ಬಳಿ ಈ ಕುರಿತು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Comments