ಬ್ರೇಕಿಂಗ್ ನ್ಯೂಸ್ : ಜಿ.ಟಿ.ದೇವೆಗೌಡರಿಗೆ ಕೊನೆಗೂ ಫಿಕ್ಸ್ ಆಯ್ತು ಈ ಖಾತೆ..!

ಮೈತ್ರಿ ಸರ್ಕಾರದ ಖಾತೆ ಹಂಚಿಕೆಯಾದ ನಂತರ ಜೆಡಿಎಸ್ ನ ಸಚಿವ ಜಿಟಿ ದೇವೇಗೌಡ ತಮಗೆ ಸಿಕ್ಕಿದಂತಹ ಉನ್ನತ ಶಿಕ್ಷಣ ಖಾತೆಯ ಬಗ್ಗೆ ಅಪಸ್ವರವನ್ನು ತೋರಿಸಿದ್ದರು. ಅಷ್ಟೆ ಅಲ್ಲದೆ ಇತ್ತೀಚಿಗೆ ನಡೆದ ಉನ್ನತ ಶಿಕ್ಷಣ ಇಲಾಖೆಯ ಸಭೆಗೂ ಕೂಡ ಗೈರಾಗಿದ್ದರು. ಇದೇ ವೇಳೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡರ ಖಾತೆ ಬದಲಾವಣೆಗೆ ಸಿಎಂ ಕುಮಾರಸ್ವಾಮಿ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಉನ್ನತ ಶಿಕ್ಷಣ ಇಲಾಖೆ ಖಾತೆಯ ಬದಲಾಗಿ ಸಿಎಂ ಬಳಿ ಇರುವ ಅಬಕಾರಿ ಅಥವಾ ಸಹಕಾರ ಇಲಾಖೆ ನೀಡುವ ಸಾಧ್ಯತೆಗಳಿವೆ. ಈ ಬಗ್ಗೆ ಸೋಮವಾರ ಅಥಾವ ಮಂಗಳವಾರ ಅಧಿಕೃತ ಪ್ರಕಟಣೆ ಹೊರ ಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಖಾತೆ ಬದಲಾವಣೆ ಮಾಡಿಕೊಳ್ಳುವಂತೆ ಸಿ.ಎಂ ಹೆಚ್’ಡಿಕೆ ಅವರು ಬಂಡೆಪ್ಪ ಕಾಶಂಪೂರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಬಂಡೆಪ್ಪ ಕಾಶಂಪೂರ್ ತಮ್ಮ ಖಾತೆಯನ್ನು ಬಿಟ್ಟುಕೊಡುವುದಕ್ಕೆ ಒಪ್ಪದಿರುವ ಕಾರಣ ತಮ್ಮ ಬಳಿ ಇದ್ದ ಅಬಕಾರಿ ಖಾತೆಯನ್ನು ಹೆಚ್.ಡಿಕೆ ನೀಡಿದ್ದಾರೆ ಎಂದು ತಿಳಿಸಲಾಗುತ್ತಿದೆ.
Comments