ಸಚಿವ ಡಿ.ಕೆ.ಶಿ ಗೆ ಒಲಿಯಲಿದೆ ಈ ಸ್ಥಾನ- ಅಚ್ಚರಿ ಭವಿಷ್ಯ ನುಡಿದ ಶಿವಯೋಗಿ ಸ್ವಾಮೀಜಿ..!

ಮೈತ್ರಿ ಸರ್ಕಾರ ರಚನೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದ ಡಿಕೆ ಶಿವಕುಮಾರ್ ಅವರ ಆರಾಧ್ಯ ದೈವವಾದ ಕಾಡು ಸಿದ್ದೇಶ್ವರ ಮಠದ ಶಿವಯೋಗಿ ಶ್ರೀಗಳು ಅವರಿಗೆ ಮಹತ್ವದ ಸಲಹೆಯೊಂದನ್ನು ತಿಳಿಸಿದ್ದಾರೆ.
ಡಿ.ಕೆ.ಶಿ ಅವರು ಮಠದ ಮಗನಾಗಿಯೇ ಬೆಳೆದಿದ್ದಾರೆ. ಇಂತಹದ್ದೇ ಖಾತೆ ಬೇಕು ಎಂದು ಅವರು ಅಪೇಕ್ಷೆ ಪಡುವುದಿಲ್ಲ. ಅವರು ಆ ರೀತಿಯಾಗಿ ಅಪೇಕ್ಷೆ ಪಡುವುದೂ ಕೂಡ ಬೇಡ. ಯಾವುದೇ ಖಾತೆ ಬಂದರೂ ಕಾಯಕವೇ ಕೈಲಾಸ ಎಂದು ನಿರ್ವಹಿಸಿಕೊಂಡು ಹೋಗಲಿ. ಇರುವ ಸ್ಥಾನದಲ್ಲೇ ಅವರು ಸಾಧನೆ ಮಾಡಲಿ ಎಂದು ತಿಳಿಸಿದ್ದಾರೆ. ಮುಂದೊಂದು ದಿನ ಡಿಕೆಶಿ ಉನ್ನತ ಸ್ಥಾನಕ್ಕೆ ತಲುಪುವುದು ಖಂಡಿತ ಎಂದು ಕಾಡುಸಿದ್ದೇಶ್ವರ ಮಠದ ಶಿವಯೋಗಿ ಸ್ವಾಮೀಜಿಯವರು ಡಿಕೆಶಿ ಅವರಿಗೆ ಸಲಹೆಯನ್ನು ಕೊಟ್ಟಿದ್ದಾರೆ.
Comments