ಯೂ-ಟರ್ನ್ ತೆಗೆದುಕೊಂಡು ಕುರುಡಾದ ಕುಮಾರಣ್ಣ ನ ಸರ್ಕಾರ
ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದಾಗಿ ಮೊದಲು ಭರವಸೆ ನೀಡಿದ್ದ ಕರ್ನಾಟಕ ಸರ್ಕಾರ ಈಗ ಯೂ ಟರ್ನ್ ತೆಗೆದುಕೊಂಡಿದೆ.
ಸ್ಟೇಟ್ ರೋಡ್ ಟ್ರಾನ್ಸ್ ಪೋರ್ಟ್ ಅಂಡರ್ ಟೇಕಿಂಗ್ಸ್ ಈಗಾಗಲೇ ಪಾಸ್ ವಿತರಣೆಯನ್ನು ಆರಂಭಿಸಿದ್ದು, ಕೇವಲ ಪರಿಶಿಷ್ಠ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಾಸ್ ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.25 ನಷ್ಟು ಶುಲ್ಕವನ್ನು ಪಾವತಿಸಬೇಕಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವುದರಿಂದ ಸರ್ಕಾರಕ್ಕೆ ಸುಮಾರು 630 ಕೋಟಿ ರೂಪಾಯಿಯಷ್ಟು ಹೊರೆಯಾಗುತ್ತದೆ. ಆದ್ದರಿಂದ ಉಚಿತ ಬಸ್ ಪಾಸ್ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಯೋಚಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆಯೂ ಎಚ್ ಡಿ ಕುಮಾರಸ್ವಾಮಿ ಇದೇ ರೀತಿ ಯೂ ಟರ್ನ್ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
Comments